ಪ್ರಶಸ್ತಿ ವಿಜೇತ ಖ್ಯಾತ ತುಳು ಸಾಹಿತಿ ಶ್ರೀಮತಿ ಜಯಂತಿ ಬಂಗೇರ ಇವರ ಪತಿ, ಮೂಡಬಿದ್ರಿ ಸಪಲಿಗ ಸೇವಾ ಸಂಘದ ಮಾಜಿ ಅಧ್ಯಕ್ಷರು , ಮೂಡಬಿದ್ರೆ ಸುಜಯ ಹಾಲೋ ಬ್ಲಾಕ್ ಇಂಡಸ್ಟ್ರಿ ಇದರ ಮಾಲಕರಾದ ಶ್ರೀ ಸದಾಶಿವ ಬಂಗೇರ (72 ವ ) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 09-03-2025 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ಸಂಜೆ 7.30 ಕೆ ಜರುಗಿತು. ಮೃತರ ಪತ್ನಿ ತುಳು ಸಾಹಿತಿ, ಉಡಲ್ ತುಳು ತ್ರೈಮಾಸಿಕ ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ, ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 13 ವರ್ಷ ಎಂ.ಆರ್.ಪಿ. ಎಲ್ ನಲ್ಲಿ ಉದ್ಯೋಗದಲ್ಲಿದರು. ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಾಗಿದ್ದರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಅಗಲುವಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ . ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ,ತುಳು ವರ್ಲ್ಡ್ ಫೌಂಡೇಶನ್ ಡಾ. ರಾಜೇಶ್ ಆಳ್ವ, ತುಳು ಕೂಟ ಕುಡ್ಲ ಅಧ್ಯಕ್ಷೆ ಹೇಮ ದಾಮೋದರ್ ನಿಸರ್ಗ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ
Trending
- ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು – ದ.ಕ. ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭ ಅ.19 ರಂದು
- ಧ್ವನಿ ಬೆಳಕು ಮಾಲಕರ ಸಂಘ – ಕಾವೂರ್ ವಲಯದ ನೂತನ ಪದಾಧಿಕಾರಿಗಳ ಆಯ್ಕೆ
- ದುಬೈನಲ್ಲಿ ‘ಗಮ್ಮತ್ ಕಲಾವಿದೆರ್’ ನಾಟಕ ತಂಡದ 14ನೇ ವಾರ್ಷಿಕೋತ್ಸವ – ‘ಪೋನಗ ಕೊನೊಪರಾ..?’ ನಾಟಕದ ಪ್ರಥಮ ಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ
- ಖಚಿತ ಮಾಹಿತಿ ಮೇರೆಗೆ ದಾಳಿ – ಮೂಡುಬಿದಿರೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಭೇದಿಸಿದ ಪೊಲೀಸರು ನಾಲ್ವರು ಬಂಧನ | ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ
- ಕಾರ್ಕಳ ಮಾಜಿ ಶಾಸಕ, ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಆತ್ಮಹತ್ಯೆ
- “ಕಾಂತಾರ” ಸಿನಿಮಾದಲ್ಲಿ ದೈವಗಳಿಗೆ ಅಪಚಾರ ಆಗಿಲ್ಲ: ಐಕಳ ಹರೀಶ್ ಶೆಟ್ಟಿ ಸ್ಪಷ್ಟನೆ
- ಬಂಟರ ಸಂಘ (ರಿ.) ಬಜಪೆ ವಲಯದ ಅಧ್ಯಕ್ಷರಾಗಿ ಶ್ರೀ ವೇಣುಗೋಪಾಲ್ ಶೆಟ್ಟಿ ಆಯ್ಕೆ
- ಕಂಬಳಕ್ಕೆ 2 ಕೋಟಿ ಅನುದಾನ ಮೀಸಲು : ಐಪಿಎಲ್ ಮಾದರಿಯಲ್ಲಿ ಕಂಬಳ ಆಯೋಜನೆ ಚಿಂತನೆ