ಕುಂದಾಪುರ: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಜಿಲ್ಲಾ ಪೊಲೀಸ್ ಕಛೇರಿಯ ಹೆಡ್ ಕಾನ್ ಸ್ಟೇಬಲ್ ಶಿವಾನಂದ ನಾಯರಿ ಅವರ ಸೇವೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ಕುಂದಾಪುರ ಘಟಕ ಅವರ ಮನೆಗೆ ತೆರಳಿ ಕುಟುಂಬದವರ ಸಮ್ಮುಖದಲ್ಲಿ ಶಿವಾನಂದ ಬಾಯರಿ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟ್ ರ್ ಕ್ರೀಡಾಪಟು, ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ರವೀಂದ್ರ ತಲ್ಲೂರು, ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಂಯೋಜಕರು ಶಿವಾನಂದ ತಲ್ಲೂರು ಹಾಗೂ ಕುಂದಾಪುರ ಘಟಕ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಆನಂದ್ ಖಾರ್ವಿ, ಕೇಶವ ಖಾರ್ವಿ, ನಿತ್ಯಾನಂದ ನಾಯ್ಕ್ , ಉಮೇಶ್ ನಾಯರಿ ಕಿರಿಮಂಜೇಶ್ವರ, ನವೀನ್ ನಾಯರಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು. ಹರ್ಷವರ್ಧನ್ ಖಾರ್ವಿ ಯವರು ಕಾರ್ಯಕ್ರಮ ನಿರೂಪಿಸಿದರು
Trending
- ಡಿಸೆಂಬರ್ 5 ರಂದು ಬೆಳಿಗ್ಗೆ 8.55ಕ್ಕೆ ಶಿಲಾನ್ಯಾಸ ಕಾರ್ಯಕ್ರಮ
- ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ – ಯಕ್ಷಾಂಗಣ ಪ್ರಶಸ್ತಿ ಪ್ರದಾನ
- “ಎಂಸಿಎಫ್ ಹೆಸರು ಉಳಿಸಿ” ಅಭಿಯಾನ – ಐತಿಹಾಸಿಕ ಮೊದಲ ಸಭೆ ಮಂಗಳೂರಿನಲ್ಲಿ ಯಶಸ್ವಿ
- ಕಾಪು : ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಭೀಕರ ಅಪಘಾತ – ನಾಲ್ವರು ಸ್ಥಳಾಂತರಿಸುವ ವೇಳೆ ಮೃತ್ಯು
- ತೀಯಾ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಗತ್ಯ – ಸದಾಶಿವ ಉಳ್ಳಾಲ್
- ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ – ಹೊಸ ಕಚೇರಿ ಉದ್ಘಾಟನೆ
- ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆ
- ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭವ್ಯ ರೋಡ್ ಶೋ – ಜನಸಾಗರದ ನಡುವೆ ಭಾವಪೂರ್ಣ ಸ್ವಾಗತ

