ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಜೈ ಭಾರತಿ ತರುಣವೃಂದ ರಿಜಿಸ್ಟ್ರೇಡ್ ಊರ್ವ ಹೊಯ್ಗೆಬೈಲ್ ಇದರ 60ನೇ ವರ್ಷದ ವಜ್ರ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮ ಹಾಗೂ ಲಾಂಛನ ಅನಾವರಣ ವನ್ನು ರಿಯ ಫೌಂಡೇಶನ್ ವಿಶೇಷ ಚೇತನ ಮಕ್ಕಳ ವಸತಿ ಕೇಂದ್ರ ಕುಲಶೇಖರ ಕೋಟಿಪುರ ಇಲ್ಲಿ ನಡೆಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಪ್ರಸಿದ್ಧ ಖ್ಯಾತ ವಕೀಲರಾದ ರಾಘವೇಂದ್ರ ರಾವ್ ಉದ್ಘಾಟಿಸಿ ಮಾತನಾಡಿ ಜೈ ಭಾರತಿ ತರುಣವೃಂದ ರಿ. ಇವರು ದಿನಚರಿ ಸಾಮಗ್ರಿಗಳನ್ನು ಕೊಟ್ಟು ಆ ಮಕ್ಕಳ ಜೊತೆ ಸೇರಿ ಸಹ ಭೋಜನವನ್ನು ಮಾಡಿರುವುದನ್ನು ಶ್ಲಾಘಿಸಿದರು. ಹಾಗೂ ಅವರ ವೈಯಕ್ತಿಕ ಜೀವನ ವನ್ನು ನೆನಪಿಸಿಕೊಂಡು ಅವರ ಮಕ್ಕಳ ಹುಟ್ಟುಹಬ್ಬವನ್ನು ಪ್ರತಿವರ್ಷ ಹಲವಾರು ಆಶ್ರಮದೊಂದಿಗೆ ಸೇರಿ ಆಚರಿಸುವುದನ್ನು ನೆನಪಿಸಿಕೊಂಡರು ಇಂತಹ ಸಮಾಜಮುಖಿ ಕೆಲಸಗಳನ್ನು ಇನ್ನು ಕೂಡ ಮಾಡಲಿ ಎಂದು ನಮ್ಮನ್ನು ಹಾರೈಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ರೈ ಮಾತನಾಡಿ ನೀವು ಮಾಡಿದ ಈ ಕಾರ್ಯಕ್ರಮ ಆ ದೇವರು ನಿಮ್ಮನ್ನು ಒಳ್ಳೆಯದನ್ನು ಮಾಡಲಿ ನಿಮ್ಮ ಸಂಸ್ಥೆ ಇನ್ನೂ ಕೂಡ ಇಂಥ ಕೆಲಸಗಳನ್ನು ಮುಂದುವರಿಸಲಿ ಇಂಥ ಈ ಪುಣ್ಯ ಕೆಲಸಗಳು ಬೇರೆ ಸಂಸ್ಥೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಅಧ್ಯಕ್ಷರಾದ ವಿಕ್ರಂ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೇವಾಡಿಗ ಗೌರವಾಧ್ಯಕ್ಷರಾದ ಕೇಶವ ಕರ್ಕೇರ ಹಾಗು ರಿಯ ಫೌಂಡೇಶನ್ ವಾರ್ಡನ್ ರಶ್ಮಿತಾ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಸತೀಶ್ ಶೆಟ್ಟಿ ಕೊಡಿಯಲ್ ಬೈಲ್ ನೆರವೇರಿಸಿದರು ಸಂಘದ ಪ್ರಸ್ತಾವಿಕ ವರದಿಯನ್ನು iಸತೀಶ್ ಪೂಜಾರಿ ಅಶೋಕನಗರ ನೆರವೇರಿಸಿದರು ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು
