ಮಂಗಳೂರು : ನಗರದ ಕಾರ್ ಸ್ಟ್ರೀಟ್‌ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್(25), ನಾಟೆಕಲ್ ನಿವಾಸಿ ಹೈದರ್ ಆಲಿ ಆಸಿಲ್(20), ನಾಟೆಕಲ್‌ನ ಅಸೈಗೋಳಿ ನಿವಾಸಿ ಮೊಹಮ್ಮದ್ ತಸ್ವೀರ್(34) ಬಂಧಿತ ಆರೋಪಿಗಳು. ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿ ಗಮನ ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಶೇಟ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿ 6,00,000 ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ ಸ್ಕೂಟರ್, 2 ಮೊಬೈಲ್ ಫೋನ್ ಗಳು ವಶಪಡಿಸಿಕೊಂಡಿದ್ದಾರೆ.
Trending
- ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ
- ಬಲೆ ತುಳು ಓದುಗ : (ಜೂನ್ 30) ; ಅಕಾಡೆಮಿಗೆ ಅಲೋಶಿಯಸ್ ವಿದ್ಯಾರ್ಥಿಗಳ ಭೇಟಿ
- ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ದ್ರೋಹ : ಸಂತ್ರಸ್ತ ಯುವತಿಯಿಂದ ಮಗುವಿಗೆ ಜನ್ಮ…!
- ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ
- ಎಮ್.ಸಿ.ಸಿ. ಬ್ಯಾಂಕಿನಿಂದ ನೋಟ್ ಪುಸ್ತಕ,ಕೊಡೆ ಮತ್ತು ಸ್ಕೂಲ್ ಬ್ಯಾಗ್ ವಿತರಣೆ
- ತುಳು ನಾಟಕ ಕಾರ್ಯಗಾರ ಉದ್ಘಾಟನೆ, ಕಾಲೇಜ್ ವಿದ್ಯಾರ್ಥಿಗಳಿಗೆ ತುಳು ನಾಟಕದ ಅಭಿರುಚಿ ಮೂಡಿಸುವುದು ಅಗತ್ಯ : ತಮ್ಮ ಲಕ್ಷ್ಮಣ
- ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಸ್ಥಳಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಭೇಟಿ
- ಬಿಜೈ ಮಸಾಜ್ ಪಾರ್ಲರಿನಲ್ಲಿ ಅಕ್ರಮ ಚಟುವಟಿಕೆ ; ದಾಳಿ ನಡೆಸಿ ಟ್ರೇಡ್ ಲೈಸನ್ಸ್ ರದ್ದುಪಡಿಸಿದ ಪೊಲೀಸರು