ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನದ ಬೇಟೆಯಾಡಿದ್ದಾರೆ.ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಅಬುಧಾಬಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ್ನಲ್ಲಿ ಈ ಬೃಹತ್ ಪ್ರಮಾಣದ ಅಕ್ರಮ ಚಿನ್ನ ದೊರೆತಿದೆ. ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ ಆತನನ್ನು ವಿಚಾರಣೆ ನಡೆಸಿ ಅವರ ದೇಹವನ್ನು ಪರೀಕ್ಷಿಸುವಾಗ, ಅವರ ಸೊಂಟದ ಪ್ರದೇಶದಲ್ಲಿ ಬೀಪ್ ಶಬ್ದ ಹೊರಹೊಮ್ಮಿದೆ. ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿರುವ 5 ಅಂಡಾಕಾರದ ಆಕಾರದ ಕ್ಯಾಪ್ಸೂಲ್ ಗಳನ್ನು ಅವನ ಗುದನಾಳದಲ್ಲಿ ಮರೆಮಾಡಿ ಸಾಗಾಟ ಮಾಡುತ್ತಿರುವುದು ಬಯಲಾಗಿದ್ದು ಆತನಿಂದ ವಶಕ್ಕೆ ಪಡೆಯಲಾಗಿದೆ. ಇದು 24 ಕ್ಯಾರೆಟ್ ಶುದ್ಧತೆಯ ಚಿನ್ನವಾಗಿದ್ದು 1,579.000 ಗ್ರಾಂ ತೂಕ ಹೊಂದಿದೆ. ಇದರ ಮೌಲ್ಯ ಸುಮಾರು ರೂ. 98,68,750 ಆಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
Trending
- ಮಂಗಳೂರು : ದಾಖಲೆ ಮಾಡಿಸಲು 4 ಲಕ್ಷಕ್ಕೆ ಬೇಡಿಕೆ: ಲಂಚ ಸ್ವೀಕರಿಸುತ್ತಿದ್ದಾಗ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಪದಗ್ರಹಣ ಸಮಾರಂಭ
- ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮುಖ್ಯ ಮಂತ್ರಿಗಳಿಗೆ ಮಂಗಳೂರು ವಕೀಲರ ಸಂಘ ಮನವಿ ಸಲ್ಲಿಕೆ
- ಮಂಗಳೂರು : ಲಂಚ ಸ್ವೀಕರಿಸಿದ ಪಿಡಿಒಗೆ 3 ವರ್ಷ ಜೈಲು ಶಿಕ್ಷೆ..!!
- ಅತಿ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಕಿರೀಟ ತೊಟ್ಟ ಗುಕೇಶ್ ; ಚೀನಾ ಸೋಲಿಸಿ ಇತಿಹಾಸ ನಿರ್ಮಿಸಿದ ಭಾರತೀಯ
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ , ಗೌರವ ಅಧ್ಯಕ್ಷರಾಗಿ ಕೃಷ್ಣಕುಮಾರ್ ಆಯ್ಕೆ
- ತುಳುನಾಡ ರಕ್ಷಣಾ ವೇದಿಕೆ ಭೈರಂಪಲ್ಲಿ ಘಟಕ ರಚನಾ ಪೂರ್ವಭಾವಿ ಸಭೆ
- ಸನ್ನಿಧಿ ಕಶೆಕೋಡಿ ಯವರಿಗೆ ತುಳುನಾಡ ರಕ್ಷಣಾ ವೇದಿಕೆ ಸನ್ಮಾನ