ಕಡಬ: ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ವೃದ್ಧರೋರ್ವರನ್ನು ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಅರ್ಧ ದಾರಿಯಲ್ಲೇ ಇಳಿಸಿಹೋದ ಘಟನೆ ಇಂದು ಕಡಬದಲ್ಲಿ ನಡೆದಿದೆ.
ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ.
ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಕಂಡಕ್ಟರ್ ನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Trending
- ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ: ಮೂವರು ಆರೋಪಿಗಳ ಬಂಧನ ₹2 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಪತ್ತೆ; ಯುಪಿಸಿಎಲ್ ಗುತ್ತಿಗೆ ವಿವಾದವೇ ಕೊಲೆಗೆ ಪ್ರಮುಖ ಕಾರಣ?
- ಆಗಸ್ಟ್ 9, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತಾದಳ ಕಾರ್ಯಕರ್ತರ ಸಭೆ
- ಶಾಲಾ ಮಕ್ಕಳ ವಾಹನಗಳಲ್ಲಿ ನಿಯಮ ಉಲ್ಲಂಘನೆ: ಕಲ್ಲಡ್ಕದಲ್ಲಿ ಪೊಲೀಸರ ವಾಹನ ತಪಾಸಣೆ; 13 ಪ್ರಕರಣ ದಾಖಲು
- ಉಡುಪಿ : ಆಟಿಡೊಂಜಿ ದಿನ’ ಕಾರ್ಯಕ್ರಮಕ್ಕೆಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಗಣ್ಯರಿಗೆ ಆಮಂತ್ರಣ
- ಉಡುಪಿ : ಆ.16ರ ತುಳುನಾಡಿನ ಸಾಂಸ್ಕೃತಿಕ ಸಂಭ್ರಮ ‘ಆಟಿಡೊಂಜಿ ದಿನ’: ಕಾರ್ಯಕ್ರಮಕ್ಕೆ ಸಚಿವ ಯು.ಟಿ. ಖಾದರ್ಗೆ ಆಹ್ವಾನ
- ಹೆಬ್ರಿ ಧನಲಕ್ಷ್ಮೀ ಸಂಜೀವಿನಿ ಒಕ್ಕೂಟದಲ್ಲಿ ₹28.19 ಲಕ್ಷ ದುರುಪಯೋಗ ಆರೋಪ – ಪ್ರಕರಣ ದಾಖಲು
- ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಆರೋಪಿಗೆ ಬಂಧನ – ಪೊಲೀಸರ ಮೇಲೆ ಹಲ್ಲೆ ಆರೋಪ, ರಾಜು ಕಾಲಿಗೆ ಗುಂಡು
- ನಟ ಚೇತನ್ ಅಹಿಂಸಾಗೆ ತುಳುನಾಡ ರಕ್ಷಣಾ ವೇದಿಕೆಯಿಂದ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಆಹ್ವಾನ
