ಮಂಗಳೂರು, ಆ. 2: ನಗರದ ಬಾಂಬೆ ಲಕ್ಕಿ ರೆಸ್ಟೋರೆಂಟ್ನಲ್ಲಿ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಕ್ರಿಸ್ಟಲ್ ಪ್ಯೂರ್ ಹರ್ಬಲ್ ಬ್ಯೂಟಿ & ವೆಲ್ನೆಸ್ ಸಂಸ್ಥೆಯ ನೂತನ ಹರ್ಬಲ್ ಸೌಂದರ್ಯ ಮತ್ತು ವೆಲ್ನೆಸ್ ಉತ್ಪನ್ನಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಹೇರ್ ಕೇರ್, ಸ್ಕಿನ್ ಕೇರ್ ಹಾಗೂ ಬಾಡಿ ಕೇರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು. ಇಂದಿನ ಜೀವನಶೈಲಿಯಲ್ಲಿ ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ನೈಸರ್ಗಿಕ ಹರ್ಬಲ್ ಉತ್ಪನ್ನಗಳು ಆರೋಗ್ಯಕರ ಹಾಗೂ ಸುರಕ್ಷಿತ ಜೀವನಶೈಲಿಗೆ ಪೂರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ, ಸಮಾಜಮುಖಿ ಸೇವೆ, ತುಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ಮತ್ತಿತರ ಗಣ್ಯರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಗಣ್ಯರು ಅವರ ಸಾಮಾಜಿಕ ಕಳಕಳಿ ಹಾಗೂ ಜನಪರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ಮೊಹಮ್ಮದ್ (ಯುಬಿ ಕಾರ್ಪೊರೇಷನ್), ಉಮರ್ ಫಾರೂಕ್ (ಗೋಲ್ಡನ್ ಟ್ರಾವೆಲ್ಸ್), ಎ.ಕೆ. ಮಯ್ಯಾಡಿ, ಹಮೀದ್ ಹಾಸನ್, ಸಿಸ್ಟರ್ ಡಾ. ಸದನಾ (ಪ್ರಾಂಶುಪಾಲರು, ಸೇಂಟ್ ರೇಮಂಡ್ಸ್ ಪಿಯು ಕಾಲೇಜು, ವಾಮಂಜೂರು), ಹಾರಿಸ್ ಮದನಿ, ಮೊಹಮ್ಮದ್ ಶರೀಫ್ ಮದನಿ, ನವಾಜ್ ಸಖಾಫಿ, ಅಫ್ವಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕ್ರಿಸ್ಟಲ್ ಪ್ಯೂರ್ ರೀಗ್ರೋತ್ ಹೇರ್ ಆಯಿಲ್, ರೀಗ್ರೋತ್ ಶಾಂಪೂ, ಉಬ್ಟಾನ್ ಫೇಸ್ ಪ್ಯಾಕ್ ಹಾಗೂ ಹರ್ಬಲ್ ಬ್ಯೂಟಿ ಸೋಪ್ ಸೇರಿದಂತೆ ಹಲವು ನೂತನ ಹರ್ಬಲ್ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಯಿತು.
ಸಂಸ್ಥೆಯ ಪ್ರತಿನಿಧಿಗಳಾದ ರುಕ್ಷನಾ, ಮುಜೀಬ್ ಹಾಗೂ ಸಲ್ಮಾ ಮಾತನಾಡಿ, “ನಮ್ಮ ಎಲ್ಲಾ ಉತ್ಪನ್ನಗಳು 100 ಪ್ರತಿಶತ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದ್ದು, ಪ್ಯಾರಾಬೆನ್, ಸಲ್ಫೇಟ್ ಹಾಗೂ ಸಿಲಿಕೋನ್ ಮುಕ್ತವಾಗಿವೆ. ಆರೋಗ್ಯಕರ, ಸುರಕ್ಷಿತ ಮತ್ತು ಗುಣಮಟ್ಟದ ಹರ್ಬಲ್ ಸೌಂದರ್ಯ ಉತ್ಪನ್ನಗಳನ್ನು ಪ್ರತಿಯೊಬ್ಬ ಗ್ರಾಹಕರಿಗೂ ತಲುಪಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಲಾಂಚ್ ಆಫರ್ಗಳು ಹಾಗೂ ಆಕರ್ಷಕ ಉಡುಗೊರೆಗಳನ್ನು ಗ್ರಾಹಕರಿಗೆ ವಿತರಿಸಲಾಯಿತು. ಗಣ್ಯರು, ಆಹ್ವಾನಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
