ತಲಪಾಡಿ : ಭ್ಯಾರತಿ ಕವಿ, ಸಂಸ್ಕೃತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸುಬ್ಬ ಪಕ್ಕಳ ಪಂಜಾಳ (80) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು.
ತಲಪಾಡಿಯ ಕಾರಂತರ ಪಾಲು ಮನೆಯವರಾಗಿ ಪ್ರಸಿದ್ಧರಾಗಿದ್ದ ಶ್ರೀ ಪಂಜಾಳ ಅವರು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ನಂತರ ಶಿಕ್ಷಕರಾಗಿ ಹಾಗೂ ಪ್ರಾಂಶುಪಾಲರಾಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದರು.
1976 ರಿಂದ 1981ರವರೆಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ (ಈಗಿನ ಪಿ.ಎ. ಕಾಲೇಜು) ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಮುಖ್ಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ತಲಪಾಡಿ–ದೇವಿಪುರ ಪರಿಸರದಲ್ಲಿ ಹಿರಿಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಜೀವನಕ್ಕೆ ದಾರಿ ತೋರಿದವರು. ನಿವೃತ್ತಿಯ ನಂತರವೂ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳೊಂದಿಗೆ ತಲೆ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ಉಚಿತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ಅವರು, ತಮ್ಮ ಜೀವಿತಾವಧಿಯಲ್ಲೇ ದೇಹದಾನ ಮಾಡುವ ಕುರಿತು ಕರಾರು ಬರೆದು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನ ಮಾಡಿರುವುದು ಗಮನಾರ್ಹವಾಗಿದೆ.
ಮೃತರ ಅಂತಿಮ ಯಾತ್ರೆ ಅವರ ಕೋರಿಕೆಯಂತೆ ಪಿ.ಎ. ಕಾಲೇಜು ಸಮೀಪದ ಅವರ ಸ್ವಂತ ಮನೆಯಿಂದ ಇಂದು ಸಂಜೆ 5.30 ಗಂಟೆಗೆ ನೆರವೇರಲಿದೆ.
ಅವರ ನಿಧನದಿಂದ ಹಾರೋ ವಿಧದ ಸಮುದಾಯಕ್ಕೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
Trending
- ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಅಧೀಕ್ಷಕರಿಗೆ ಮನವಿ
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ೧,೫೫೦ ಸಂಸ್ಥೆಗಳು, ೪ ಲಕ್ಷ ವಿದ್ಯಾರ್ಥಿಗಳು ಹಾಗೂ ೪೦ ಸಾವಿರ ಶಿಕ್ಷಕರಿಗೆ ಕನ್ನಡ ವೈದ್ಯ ಸಾಹಿತ್ಯ ತಲುಪಿಸುವ ಸಂಕಲ್ಪ
- ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣ ಎರಡು ತಿಂಗಳ ಬಳಿಕ ಬೆಳಕಿಗೆ; ಪತ್ನಿ–ಪುತ್ರನ ಪತ್ತೆಗಾಗಿ ತನಿಖೆ
- 30 ಅಡಿ ಆಳದ ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಸುರಕ್ಷಿತ ರಕ್ಷಣೆ
- ಕಾಞಂಗಾಡ್: ನಿತ್ಯಾನಂದಆಶ್ರಮದಲ್ಲಿ ಪುಸ್ತಕ ಬಿಡುಗಡೆ
- ಬದ್ರಿಯ ಜುಮ್ಮಾ ಮಸ್ಜಿದ್ (ರಿ)ಮಲ್ಲಾರು ಮಜೂರು ಮಸ್ಜಿದ್ ನ ನೂತನ ಕಾಮಗಾರಿಗಳ ಉದ್ಘಾಟನೆ
- ಮಂಗಳೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಯಶಸ್ವಿ
- ತುಳು ಭಾಷೆಗೆ ಅಧಿಕೃತ ಮಾನ್ಯತೆ: ತುಳುನಾಡ ರಕ್ಷಣಾ ವೇದಿಕೆಗೆ ಪ್ರವೀಣ ಪರ್ಕಳ ಅಭಿನಂದನೆ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಪ್ರಾಯೋಜಕತ್ವ ಕುರಿತು ಚರ್ಚೆ

