ಮಂಗಳೂರು :- ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 24/04/2025ರಂದು ಸಂಭವಿಸುತ್ತಿರುವ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ವಿದ್ಯಮಾನದ ಬಗ್ಗೆ ವಿವರಣೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆಗಳನ್ನು ಆಸಕ್ತ ಸಂದರ್ಶಕರಿಗೆ ಏರ್ಪಡಿಸಲಾಗಿತ್ತು. ಸಂದರ್ಶಕರು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂದೇಹಗಳನ್ನು ಪರಿಹರಿಸಿಕೊಂಡರು. ಆದರೆ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತಿರುವ ಸಮಯದಲ್ಲಿ ಮೋಡ ಕವಿದ ವಾತಾವರಣವಿದ್ದ ಕಾರಣ ಅದರ ಅನುಭವವನ್ನು ಪಡೆಯಲು ಸಾಧ್ಯವಾಗಲಿಲ್ಲ. ವೀಕ್ಷಕರಿಗೆ ಸೋಲಾರ್ ಫಿಲ್ಟರ್ ಅಳವಡಿಸಿದ ದೂರದರ್ಶಕದ ಮೂಲಕ ಸೌರಕಲೆಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಯಿತು.
ಬೆಂಗಳೂರಿನ ಜವಾಹರ್‍ಲಾಲ್ ನೆಹರು ತಾರಾಲಯ, ಚೆನ್ನೈನ ಪೆರಿಯಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ ಮತ್ತು ಇನ್ನಿತರ ಕೇಂದ್ರಗಳ ಸಮನ್ವಯತೆಯೊಂದಿಗೆ ಭೂಮಿಯ ಸುತ್ತಳತೆ, ಭೂಮಿ ತಿರುಗುವ ವೇಗ ಮತ್ತು ನಿಜ ಉತ್ತರ ದಿಕ್ಕುಗಳನ್ನು ಕಂಡುಹಿಡಿಯುವ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು.
ಕೇಂದ್ರದ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೇಂದ್ರದ ಸಿಬ್ಬಂದಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವಲ್ಲಿ ಸಹಕರಿಸಿದರು.
Trending
- ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣ ಕೂಗಿಗೆ ಧ್ವನಿಗೂಡಿಸಿದ ಶಾಸಕ ಕಾಮತ್:-
- ಮಂಗಳೂರು : ದ.ಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೆಗೆದುಕೊಂಡಿರುವ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೀವ್ರ ತೊಂದರೆ : ಶಾಸಕ ವೇದವ್ಯಾಸ ಕಾಮತ್.!
- ತುಮಕೂರು ; ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಬೈಕ್ ಕೊಟ್ಟ ತಂದೆಗೆ ಜೈಲು ಶಿಕ್ಷೆ,ತುಮಕೂರು ಜಿಲ್ಲೆಯ ಗುಬ್ಬಿ ಪ್ರಧಾನ ನ್ಯಾಯಾಲಯ ಮಹತ್ವದ ತೀರ್ಪು
- ಮಂಗಳೂರು : ಸಹಕಾರಿ ಬ್ಯಾಂಕ್‌ನಲ್ಲಿ ಗೋಲ್ಡ್’ ಗೋಲ್‌ಮಾಲ್| ಗ್ರಾಹಕರು ಅಡವಿಟ್ಟ ಚಿನ್ನಕ್ಕೆ ಕನ್ನ ಹಾಕಿದ ಬ್ಯಾಂಕ್ ಕ್ಯಾಷಿಯರ್
- ತುಳುರಂಗಭೂಮಿಯ ಹೆಸರಾಂತ ನಾಟಕ ಸಂಸ್ಥೆ ಚಾಪರ್ಕ ತಂಡದ 60ನೇ ನಾಟಕ “ಎನ್ನನೇ ಕಥೆ” ಮುಹೂರ್ತ
- ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹ್ವಾನ..!
- ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ , ವೈದ್ಯ ಸಂಘ ಅಧ್ಯಕ್ಷರುಗಳಿಗೆ ಗೌರವ ಸನ್ಮಾನ
- ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ