Monday, April 15, 2024
spot_img
More

  Latest Posts

  ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಹಿಂದುಳಿದ ಮೋರ್ಚದ ಉಪಾಧ್ಯಕ್ಷರಾಗಿ ರಾಘವೇಂದ್ರ ರಾವ್ ಆಯ್ಕೆ

  ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ,ವಿದ್ಯಾರ್ಥಿಪರ ಹಲವಾರು ಹೋರಾಟಗಳನ್ನು ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿ ನಂತರ ವಕೀಲ ವೃತ್ತಿಯನ್ನು ಪ್ರಾರಂಭಿಸಿ ನ್ಯಾಯಾಲಯದಲ್ಲಿ ಯಶಸ್ವಿ ವಕೀಲರೆಂದು ಹೆಸರುಗಳಿಸಿರುತ್ತಾರೆ. ತುಳುನಾಡ ರಕ್ಷಣಾ ವೇದಿಕೆ ವಕೀಲರ ಘಟಕದ ಅದ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸಿ ಯುವ ನಾಯಕರೆಂದು ಜಿಲ್ಲೆಯಲ್ಲಿ ಜನಪ್ರಿಯ ರಾಗಿರುತ್ತಾರೆ. ಪ್ರಸ್ತುತ ರಾಘವೇಂದ್ರ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಹಿಂದುಳಿದ ಮೋರ್ಚದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶುಭ ಸಂದರ್ಭದಲ್ಲಿ ತಮಗೆ ಹೃದಯಪೂರ್ವಕವಾದ ಅಭಿನಂದನೆಗಳು. ತಮ್ಮ ಆಯ್ಕೆಗೆ ಕಾರಣಕರ್ತರಾದ ರಾಜ್ಯ ಭಾಜಪ ಕಾರ್ಯದರ್ಶಿ ಬ್ರಿಜೇಶ್ ಚೌಟ ,ನಮ್ಮ ನೆಚ್ಚಿನ ಶಾಸಕರಾದ ವೇದ ವ್ಯಾಸ ಕಾಮತ್ ಹಾಗೂ ಜಿಲ್ಲಾಧ್ಯಕ್ಷರವರಿಗೂ ಕೃತಜ್ಞತೆಗಳು.ತಮ್ಮ ಉಪಾಧ್ಯಕ್ಷ ಅವಧಿಯಲ್ಲಿ ಜನತಾ ಪಕ್ಷವು ಇನ್ನಷ್ಟು ಬಲಿಷ್ಠವಾಗಲಿ ಎಂದು ಅಪೇಕ್ಷಿಸುತ್ತೇನೆ. ತಮಗೆ ಶುಭಾಶಯಗಳು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss