Monday, April 15, 2024
spot_img
More

  Latest Posts

  ತಲಪಾಡಿ: ರಾಜೇಶ್ ಶೆಟ್ಟಿ ಯವರಿಗೆ ಬೈಕ್ ಢಿಕ್ಕಿ|ಮೃತ್ಯು. ತಲಪಾಡಿ ಪರಿಸರದಲ್ಲಿ ತೀವ್ರ ಶೋಕ.

  ತುಳುನಾಡ ಸೂರ್ಯ ನ್ಯೂಸ್ : ರಸ್ತೆ ದಾಟುತ್ತಿದ್ದ ರಾಜೇಶ್ ಶೆಟ್ಟಿ ಯವರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆಯೊಂದು ತಲಪಾಡಿಯಲ್ಲಿ ನಡೆದಿದೆ

  ರಾಜೇಶ್ ಶೆಟ್ಟಿ (49) ಮೃತಪಟ್ಟ ವ್ಯಕ್ತಿ. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ ತಂಗುದಾಣದ ಬಳಿ ಬೇಕರಿ ಇದೆ. ಎದುರು ಭಾಗದಲ್ಲೇ ಹೆದ್ದಾರಿ ಸಮೀಪ ಮನೆ ಕೂಡಾ ಇದೆ. ಭಾನುವಾರ ತಲಪಾಡಿ ದೇವಿಪುರದಲ್ಲಿ ರಥೋತ್ಸವ ಇದ್ದ ಕಾರಣ ರಾಜೇಶ್ ಅವರು ತಮ್ಮ ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿದ್ದು, ಮಧ್ಯಾಹ್ನದ ಸಮಯದಲ್ಲಿ ಬೇಕರಿಗೆ ತೆರಳುತ್ತಿದ್ದರು. ರಾಜೇಶ್ ಶೆಟ್ಟಿ ಯವರು ಉತ್ತಮ ವ್ಯಕ್ತಿತ್ವ ಹೊಂದಿದವರಿಗೆ ಎಲ್ಲರೊಡನೆ ಉತ್ತಮ ಒಡನಾಟ ಹೊಂದಿದ್ದರು.

  ಈ ಸಮಯದಲ್ಲಿ ಅವರು ಹೆದ್ದಾರಿ ದಾಟಲು ನಿಂತಿದ್ದು, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಾಜೇಶ್ ಅವರು ರಸ್ತೆಗೆಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ.

  ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೈಕ್ ಸವಾರ ಮಹಮ್ಮದ್ ಸೊಹೈಲ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss