ಮಂಗಳೂರು : ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ವಿದೇ ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ ದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಪುನರಾಯ್ಕೆಯಾಗಿದ್ದಾರೆ.ವಿದೇಶ ಗಳಲ್ಲೂ ಸದಸ್ಯರನ್ನು ಹೊಂದಿರುವ ಬಂಟರ ಯಾನೆ ನಾಡವರ ಮಾತೃ ಸಂಘದ 2026–29ರ ಅವಧಿಗೆ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ
ಪುನರಾಯ್ಕೆಯ ಬಳಿಕ ಮಾತನಾಡಿದ ಅವರು, ಸಂಘದ ಮಹತ್ವಾಕಾಂಕ್ಷೆಯ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ ನಿರ್ಮಾಣ, ಹಾಗೂ ವಿಶ್ವದಾದ್ಯಂತ ಇರುವ ಸಮಾಜದ ಸದಸ್ಯರನ್ನು ಒಂದೇ ವೇದಿಕೆಯಡಿ ತರಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಕೀಲ ಉಮೇಶ್ ಶೆಟ್ಟಿ ಶೇಡೆ ಹೊಸಲಕ್ಕೆ ಅವರು ಅಜಿತ್ ಕುಮಾರ್ ರೈ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿಯಾಗಿ ವಕೀಲ ನವೀನ ಶೆಟ್ಟಿ ಹಾಗೂ ಚುನಾವಣಾಧಿಕಾರಿಯಾಗಿ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು
