ತುಮಕೂರು ; ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ ಜೈಲು ಶಿಕ್ಷೆ ನೀಡಿ ತುಮಕೂರು ಜಿಲ್ಲೆಯ ಗುಬ್ಬಿ ಪ್ರಧಾನ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕನ ತಂದೆಗೆ ಒಂದು ದಿನ ಜೈಲು ಶಿಕ್ಷೆ ನೀಡಿ 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 2024 ನವೆಂಬರ್ 06 ರಂದು ಬಾಲಕ ಬೈಕ್ ಚಲಾಯಿಸಿ ಅಪಘಾತ ಮಾಡಿದ್ದನು.ತುಮಕೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ವೇಳೆ ಗುಬ್ಬಿಯಲ್ಲಿ ಬೈಕ್ ಅಪಘಾತ ನಡೆದಿತ್ತು. ಗುಬ್ಬಿ ಸಿಐಟಿ ಕಾಲೇಜು ಬಳಿ ಮಣ್ಣಿನ ಗುಡ್ಡೆಗೆ ಡಿಕ್ಕಿಯಾಗಿ ಬಿದ್ದಿದ್ದು ಈ ಬಗ್ಗೆ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಚಾರ್ಜ್ ಶೀಟ್ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಗುಬ್ಬಿ ಸಿವಿಲ್ ನ್ಯಾಯಾಲಯ ಬಾಲಕನಿಗೆ ಬೈಕ್ ಕೊಟ್ಟ ತಪ್ಪಿಗೆ ತಂದೆಗೆ ಶಿಕ್ಷೆ ನೀಡಿ ತೀರ್ಪು ನೀಡಿದೆ. ಮಗನಿಗೆ ಬೈಕ್ ಕೊಟ್ಟ ತಪ್ಪಿಗೆ ಕೋರ್ಟ್ ಒಂದು ದಿನ ಜೈಲು ಶಿಕ್ಷೆ ನೀಡಿದೆ. ಈ ಮೂಲಕ ಅಪ್ರಾಪ್ತರಿಗೆ ಬೈಕ್ ನೀಡುವ ಪೋಷಕರಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.