ಉಡುಪಿ
ಬೇರೆ ದೇಶಗಳಲ್ಲಿ ಉದ್ಯೋಗ ಪಡೆಯಲು ಬಯಸಿದ ಅನೇಕ ಜನರನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಬಂಗಲೂರಿನ ವಿವರ್ಸ್ ಕಾಲೋನಿ, ಅಂಕಲ್ ನಿವಾಸಿ ಶ್ರೀ ಎಲ್ಟನ್ ರೆಬೆಲೊ ಅವರ ಪತ್ನಿ ಪ್ರಕೃತಿ ವಿರುದ್ಧ ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದೆ.
ಸಂತ್ರಸ್ತರಿಂದ ಬಂದ ದೂರುಗಳ ಪ್ರಕಾರ, ಆರೋಪಿಗಳು ಆಸ್ಟ್ರೇಲಿಯಾ ಹಾಗೂ ಲಂಡನ್ ದೇಶಗಳಿಗೆ ಕೆಲಸದ ವೀಸಾ ಒದಗಿಸುವ ಭರವಸೆ ನೀಡಿ ಅನೇಕ ಜನರಿಂದ ಕೋಟಿಗಟ್ಟಲೆ ಹಣ ವಸೂಲು ಮಾಡಿದರೂ, ಯಾವುದೇ ವೀಸಾ ನೀಡದೆ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕೃತ್ಯ ನಂಬಿಕೆ ಭಂಗ (Breach of Trust), ವಂಚನೆ (Cheating), ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಹಾಗೂ ಸೈಬರ್ ಅಪರಾಧ (Online Fraud) ವಿಭಾಗಗಳಿಗೆ ಒಳಪಟ್ಟಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ ಶಂಕರ್ ರವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು,
ತನಿಖೆಗಾಗಿ ವಂಚನೆಗೊಳ್ಳಗಾದ ದಾಖಲೆಗಳನ್ನು ಒದಗಿಸಿದ್ದಾರೆ
ಪೊಲೀಸ್ ಅಧೀಕ್ಷಕರು ದೂರುಗೆ ತಕ್ಷಣ ಸ್ಪಂದಿಸಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ. FIR ಆಗಿರುತ್ತದೆ.
ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಉಪಾಧ್ಯಕ್ಷ ಜಯರಾಮ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸುನಂದ ಕೋಟ್ಯಾನ್, ಹಾಗೂ ಅನೇಕ ಮುಖಂಡರು, ಈ ಘಟನೆಯಲ್ಲಿ ಪೊಲೀಸ್ ಇಲಾಖೆಯ ಶೀಘ್ರ ಕ್ರಮವನ್ನು ಶ್ಲಾಘಿಸಿದ್ದಾರೆ.
ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಪ್ರತಿಕ್ರಿಯೆ ನೀಡುತ್ತಾ,
“ಪೊಲೀಸರು ತಕ್ಷಣ ಕಾನೂನು ನೆರವು ನೀಡುತ್ತಿರುವುದು ಜನರಲ್ಲಿ ವಿಶ್ವಾಸ ಮೂಡಿಸುತ್ತದೆ. ಇಂತಹ ತ್ವರಿತ ಕ್ರಮಗಳಿಂದ ವಂಚಕರು ಕಾನೂನು ಭಯದಿಂದ ಹಿಂದೆ ಸರಿಯುತ್ತಾರೆ,”
ಎಂದು ಹೇಳಿದ್ದಾರೆ.
ಸಂತ್ರಸ್ತರು ನ್ಯಾಯ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ವೀಸಾ ವಂಚನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.








