ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳುವಾಗ ಸೂಕ್ತ ಮುನ್ನೆಚ್ಚರಿಕೆ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ಇದೀಗ ಸಂತೆಕಟ್ಟೆ ಹಾಗೂ ಅಂಬಲಪಾಡಿಯಲ್ಲಿ ನಡೆಯುತ್ತಿದ್ದು ಕಾಮಗಾರಿ ವೇಗದಿಂದ ನಡೆಯುತ್ತಿರುವುದು ಸಮಾಧಾನದ ವಿಷಯವಾಗಿದೆ. ಆದರೆ ಅಂತಕದ ವಿಷಯ ರಸ್ತೆಯ ಎರಡು ಬದಿಗಳಲ್ಲಿ ಆಳವಾಗಿ ಗುಂಡಿಗಳನ್ನು ಕೊರೆಯುತ್ತಿದ್ದು ಬೃಹತ್ ಗುಂಡಿಗಳ ಪಕ್ಕದಲ್ಲಿ ನಿತ್ಯ ನೂರಾರು ವಾಹನಗಳು ಚಲಿಸುತ್ತಿದ್ದು ಇಲ್ಲಿ ಸಂಚರಿಸುವ ವಾಹನಗಳಿಗೆ ಸಂಬಂಧಿಸಿದ ಯಾವುದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು ಅಂಬಲಪಾಡಿಯಲ್ಲಿ ಕಾರು ಬಿದ್ದು ಅಪಘಾತವಾಗಿರುತ್ತದೆ. ಅದೇ ರೀತಿ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಮೀನು ಮಾರುವ ಬೈಕ್ ಮಾರುವ ಬೈಕ್ ಸವಾರ ಅಪಘಾತಕ್ಕೀಡಾಗಿರುತ್ತಾರೆ ಇದು ನಮಗೆಲ್ಲರಿಗೂ ಚಿಂತೆ ಮಾಡುವ ವಿಷಯವಾಗಿರುತ್ತದೆ. ಆದುದರಿಂದ ಇನ್ನಷ್ಟು ಅವಘಡಗಳು ಆಗುವ ಸಾಧ್ಯತೆ ಇದ್ದು ಕೂಡಲೇ ಸೂಕ್ತ ಮುನ್ನೆಚ್ಚರಿಕೆ ಸುರಕ್ಷ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿರುತ್ತಾರೆ. ತುಳುನಾಡ ರಕ್ಷಣಾ ವೇದಿಕೆ ನಿಯೋಗದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಮಹಿಳಾ ಅಧ್ಯಕ್ಷೇ ಶೋಭಾ ಪಾಂಗಳ, ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ ಬನ್ನಂಜೆ, ಮಮತ ಕಾಪು , ಶಂಕರ್ ಉಡುಪಿ, ವಿಜಯಶೆಟ್ಟಿ ಇದ್ದರು.