ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಐಟಿ ಸೆಲ್ ಸಂಚಾಲಕರಾಗಿ ಸತೀಶ್ ಪೂಜಾರಿ ಕೀಳಂಜೆ ಆಯ್ಕೆಯಾಗಿರುತ್ತಾರೆ. ಸತೀಶ್ ಪೂಜಾರಿ ಕೀಳಂಜೆ ರವರು ಬ್ರಹ್ಮಾವರ ತಾಲೂಕು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೇವೆ ಸಲ್ಲಿಸುತ್ತಿದ್ದು ಹಲವಾರು ಸಾಮಾಜಿಕ ಸಮಸ್ಯೆ ಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಸಂಬಂಧ ಪಟ್ಟ ಇಲಾಖೆಯ ಗಮನಸೆಳೆದು ಯಶಸ್ಸು ಕಂಡಿರುತ್ತಾರೆ. ಅವರ ಸಾಮಾಜಿಕ ಕಳಕಳಿ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಮೇಲೆ ಇದ್ದ ಅವರ ಅಪಾರ ಗೌರವ ಕಂಡು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಬ್ರಹ್ಮಾವರ ರವರು ಜಿಲ್ಲಾ ಘಟಕದ ಉನ್ನತ ಮಟ್ಟದ ಸ್ಥಾನಕ್ಕೆ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಉಡುಪಿ ಜಿಲ್ಲಾ ಐಟಿ ಸೆಲ್ ಸಂಚಾಲಕರಾಗಿ ಸತೀಶ್ ಪೂಜಾರಿ ಕೀಳಂಜೆ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
(ಐಟಿ ಸೆಲ್ ಅಂದರೆ ಮಾಹಿತಿ ತಂತ್ರಜ್ಞಾನ ಘಟಕ ಅಥವಾ ವಿಭಾಗ. ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಕಂಪನಿಗಳು ತಮ್ಮ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ನಿರ್ವಹಿಸಲು ಇದನ್ನು ಬಳಸುತ್ತವೆ. ಉದಾಹರಣೆಗೆ ತುಳುನಾಡ ರಕ್ಷಣಾ ವೇದಿಕೆ ಐಟಿ ಸೆಲ್ ಸಾಮಾಜಿಕ ಮಾಧ್ಯಮದಲ್ಲಿ ಸಂಘಟನೆ ಪ್ರಚಾರ ಮತ್ತು ನಿಲುವುಗಳನ್ನು ಹರಡುತ್ತದೆ)
