ಉಡುಪಿ:
ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಅಮ್ಮುಂಜೆ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಚ್ಚದಂತೆ ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದ್ದು, ಇದು ಕನ್ನಡ ಭಾಷೆ ಮತ್ತು ಕನ್ನಡ ಶಿಕ್ಷಣವನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಕೈಗೊಂಡಿರುವ ಮಹತ್ವದ ಹೋರಾಟವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅವರು ಹೇಳಿದರು.
ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಮಕ್ಕಳ ಭವಿಷ್ಯ ಹಾಗೂ ಕನ್ನಡ ಭಾಷೆಯ ಅಸ್ತಿತ್ವಕ್ಕಾಗಿ ಧ್ವನಿ ಎತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಸಮಾಜಕ್ಕೆ ದಿಕ್ಕು ತೋರಿಸುವಂತಿದೆ. ಶಿಕ್ಷಣವೇ ಭಾಷೆಯ ಜೀವಾಳವಾಗಿದ್ದು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಈ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡವನ್ನು ಉಳಿಸಿ ಬೆಳೆಸುವ ಈ ಹೋರಾಟದಲ್ಲಿ ಕನ್ನಡ ಹಾಗೂ ತುಳು ಸಂಘಟನೆಗಳು ಒಂದೇ ಮನೋಭಾವದೊಂದಿಗೆ ಕೈಜೋಡಿಸುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಹೋರಾಟಗಳು ಭಾಷಾ ಸಂಘಟನೆಗಳ ನಡುವೆ ಪ್ರೀತಿ–ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ. ಭಾಷೆ, ಸಂಸ್ಕೃತಿ ಹಾಗೂ ಶಿಕ್ಷಣದ ರಕ್ಷಣೆಗೆ ಸಂಘಟನೆಗಳ ಒಗ್ಗಟ್ಟು ಅವಶ್ಯಕವೆಂದು ಸುಜಯ್ ಪೂಜಾರಿ ಅವರು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆಯ ಈ ನಿಲುವಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ, ಕನ್ನಡ ಶಾಲೆಗಳ ಉಳಿವಿಗಾಗಿ ಮುಂದಿನ ದಿನಗಳಲ್ಲಿ ಸಂಯುಕ್ತ ಹೋರಾಟಕ್ಕೆ ಸಿದ್ಧವಿರುವುದಾಗಿ ಅವರು ತಿಳಿಸಿದರು.
Trending
- ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (27) ಸಾವು
- ಮಂಗಳೂರು : ಮೂಡುಬಿದಿರೆ ಇನ್ಸ್ಪೆಕ್ಟರ್ ವಿರುದ್ಧದ ಆರೋಪಗಳು ಸುಳ್ಳು — ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ
- ಕೇರಳ, ತಮಿಳುನಾಡು, ಪಾಂಡಿಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆ: 90ಕ್ಕೂ ಹೆಚ್ಚು ನಾಯಕರು ನಿಯೋಜನೆ
- ಉಡುಪಿ : ‘ಸಮಾಧಾನ ಮಹೋತ್ಸವ’ಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಪ್ರಶಾಂತ್ ಜತ್ತನ್ನ
- ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾದಳದ ಜಿಲ್ಲಾಧ್ಯಕ್ಷ ಪದಗ್ರಹಣದ ಬಳಿಕ ಹಿರಿಯ ನಾಯಕರನ್ನು ಭೇಟಿ ಮಾಡಿದ ನಿಹಾಲ್ ಎಸ್ ಕೋಡ್ತುಗುಳಿ
- ನಾಳೆ ಮಾರ್ಚ್ 20 ರಂದು ಈದುಲ್ ಫಿತ್ರ್ (ಶವ್ವಾಲ್ 1) ಆಚರಣೆ — ಉಡುಪಿಯಲ್ಲಿ ಚಂದ್ರದರ್ಶನ ದೃಢೀಕರಣ
- ದಕ್ಷಿಣ ಕನ್ನಡ ವಿದ್ಯಾರ್ಥಿ ಜನತಾದಳಕ್ಕೆ ಹೊಸ ಮುಖ – ನಿಹಾಲ್ ಎಸ್ ಕೋಡ್ತುಗುಳಿ ನೇಮಕ ,ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡರಿಂದ ಘೋಷಣೆ | ಯುವ ನಾಯಕನಿಗೆ ಎಂ.ಬಿ. ಸದಾಶಿವರ ಮಾರ್ಗದರ್ಶನ
- ಉಡುಪಿ: ಉಪ್ಪೂರು–ಕೊಳಲಗಿರಿ ಯುವ ವಿಚಾರ ವೇದಿಕೆ ರಜತ ಸಂಭ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾದ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಸೇರಿದಂತೆ ಹಲವು ಗಣ್ಯರಿಗೆ ಸನ್ಮಾನ

