ಉಡುಪಿ ಜಿಲ್ಲೆಯ ಕೋಟದ ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಓರ್ವ ಪ್ರಮುಖ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತನನ್ನು ಸುರೇಶ್ ಭಟ್ ಎಂದು ಗುರುತಿಸಲಾಗಿದೆ.
ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿ ಸದ್ಯ ವಿಚಾರಣೆ ಮುಂದುವರೆಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 205/2025, ಕಲಂ 318(3)(4), 112 ಹಾಗೂ 3(5) BNS 2023ರಡಿ ದಾಖಲಾಗಿರುವ ಪ್ರಕರಣದ ಪ್ರಕಾರ:
• ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ
• ಶಾಖಾ ಮ್ಯಾನೇಜರ್ ಸುರೇಶ್ ಭಟ್ (1ನೇ ಆರೋಪಿ)
• ಕಿರಿಯ ಗುಮಾಸ್ತ ಹರೀಶ್ ಕುಲಾಲ್ (2ನೇ ಆರೋಪಿ)
ಇವರು ಸಂಘಕ್ಕೆ ಒಟ್ಟು ₹1 ಕೋಟಿ 70 ಲಕ್ಷ ವಂಚನೆ ನಡೆಸಿದ್ದಾರೆ ಎಂಬ ಆರೋಪವಿದೆ.
ಘಟನೆ ಬಳಿಕ ಇಬ್ಬರೂ ತಲೆಮರೆಸಿಕೊಂಡಿದ್ದರು. ಅವರಲ್ಲೊಬ್ಬನಾದ 38 ವರ್ಷದ ಸುರೇಶ್ ಭಟ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ಬಳಿಯ ಗೇರು ಬೀಜ ಫ್ಯಾಕ್ಟರಿ ಪ್ರದೇಶದಲ್ಲಿ ಅಡಗಿಕೊಂಡಿದ್ದನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ
ಬಂಧನ ಕಾರ್ಯಾಚರಣೆ ಪ್ರಭು ಡಿ.ಟಿ. (ಪೋಲೀಸ್ ಉಪಾಧೀಕ್ಷಕ) ಮತ್ತು ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಾಚರಣೆಯಲ್ಲಿ ಕೋಟಾ ಪೊಲೀಸ್ ಠಾಣೆಯ:
• ಪಿ.ಎಸ್.ಐ. ಪ್ರವೀಣ ಕುಮಾರ್ (ಕಾ.&ಸು.)
• ಪಿ.ಎಸ್.ಐ. ಮಾಂತೇಶ್ ಜಾಭಗೌಡ (ತನಿಖೆ)
• ಸಿಹೆಚ್ಸಿ ಕೃಷ್ಣಶೇರೆಗಾರ
• ಸಿಹೆಚ್ಸಿ ಶ್ರೀಧರ್
• ಪಿಸಿ ವಿಜಯೇಂದ್ರ
ಇವರನ್ನು ಒಳಗೊಂಡ ತಂಡ ಪಾಲ್ಗೊಂಡಿತ್ತು.

