ಸಿದ್ದಾಪುರ | ಕುಂದಾಪುರ
ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಪ್ರದೇಶದಲ್ಲಿರುವ ತೆಂಗಿನ ಎಣ್ಣೆ ಮಿಲ್ ಒಂದರಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ಆರ್ಥಿಕ ನಷ್ಟ ಉಂಟಾದ ಘಟನೆ ವರದಿಯಾಗಿದೆ.
ಶ್ರೀ ಮಧುಮಾಯ ಆಯಿಲ್ಸ್ (ಮಧು) ಫ್ಯಾಕ್ಟರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್ನಿಂದ ತಲಾ ಒಂದೊಂದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು.
ತೆಂಗಿನೆಣ್ಣೆ ಸಂಗ್ರಹ ಹೆಚ್ಚಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿ ನಿಯಂತ್ರಣಕ್ಕೆ ತರಲು ಸಾಕಷ್ಟು ಸಮಯ ತೆಗೆದುಕೊಂಡಿತು. ಸ್ಥಳೀಯರ ಸಹಕಾರದೊಂದಿಗೆ ರಾತ್ರಿಯಿಂದ ಬೆಳಿಗ್ಗೆ ಸುಮಾರು 9 ಗಂಟೆಯವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Trending
- ಲೈಂಗಿಕ ದೌರ್ಜನ್ಯಕ್ಕೆ ನಿರಾಕರಿಸಿದ ಟೆಕ್ಕಿ ಶರ್ಮಿಳಾ ಹತ್ಯೆ: ಬೆಂಕಿ ಅವಘಡದ ಹಿಂದೆ ಭೀಕರ ಸತ್ಯ ಬಯಲು | 18 ವರ್ಷದ ಆರೋಪಿಯ ಬಂಧನ
- ಸುನಂದ ಕೋಟ್ಯಾನ್ ಅವರಿಗೆ ಕರುನಾಡ ಕಾಯಕ ಯೋಗಿ ರಾಜ್ಯ ಪ್ರಶಸ್ತಿ
- ಚಿಕ್ಕಮಗಳೂರು | ಹಣದಾಸೆಗೆ ಹೆತ್ತ ಮಗಳನ್ನೇ ದಂಧೆಗೆ ದೂಡಿದ ಪಾಪಿ ತಂದೆ – ಬೀರೂರಿನಲ್ಲಿ ಭಯಾನಕ ಪ್ರಕರಣ ಬಹಿರಂಗ
- ಕಲಾ ಪರ್ಬ” ಚಿತ್ರ–ಶಿಲ್ಪ–ಸಾಂಸ್ಕೃತಿಕ ಮೇಳವು ಜ.9ರಿಂದ 11ರವರೆಗೆ ಕದ್ರಿ ಪಾರ್ಕ್ನಲ್ಲಿ
- ಕಾರ್ಕಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಾಗಿ ಬೆಳ್ಳಿಯಪ್ಪ ಕೆ. ಯು ನೇಮಕ
- ಸುರತ್ಕಲ್ನಲ್ಲಿ ಇನ್ನ ಹಾಸ್ಪಿಟಲಿಟಿ ನೂತನ ಶಾಖೆ ಉದ್ಘಾಟನೆ, ತುಳುನಾಡ ಮಗಳು ಧನಲಕ್ಷ್ಮಿ ಪೂಜಾರಿರವರಿಗೆ ಸನ್ಮಾನ
- ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಕಾರ್ಕಳ ಇವರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ಗೆ ಬೊಲೆರೋ ಜೀಪ್ ಹಸ್ತಾಂತರ*

