*ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಸಭೆಯು ದಿನಾಂಕ 9-2-25 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಉಡುಪಿ ಜಿಲ್ಲಾ ಕಛೇರಿಯಲ್ಲಿ. ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸಂಪಾದಕ ಶಶಿ ಬಂಡಿಮಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಶಿ ಬಂಡಿಮಾರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಮಾಡಿದ ತ್ಯಾಗ ಕುರಿತು ವಿವರಿಸಿ ಶಶಿ ಬಂಡಿಮಾರ್ ರವರ ಹೆಸರಿನಲ್ಲಿ ತುಳು ಭವನದಲ್ಲಿ ಯಾವುದಾದರೂ ಒಂದು ವೇದಿಕೆ ಅಥವಾ ಸಭಾಂಗಣಕ್ಕೆ ಹೆಸರು ಇಡುವಂತೆ ಪ್ರಯತ್ನಿಸಬೇಕು ಎಂದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ಎಲ್ಲಾ ತುಳು ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕು ಎಂದರು.
ತುಳುನಾಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಕೃಷ್ಣ ಕುಮಾರ್, ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಗೌರವ ಸಲಹೆಗಾರ ಸುಧಾಕರ್ ಅಮೀನ್, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗೌರವ ಅಧ್ಯಕ್ಷ ಸುರೇಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ
ಉಮೇಶ್ ಶೆಟ್ಟಿ ಹಾವಂಜೆ, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ , ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ ಆರ್,ಶಹಾಬುದ್ದೀನ್ , ಗುಲಾಬಿ ,ನಾಗಪ್ಪ , ಸುಲೋಚನಾ, ವಿನೋದ, ಗುಲಾಬಿ ,ಸಂಜೀವ , ಮನೀಶ್ ನೇಜರು ,ಮೋಹಿನಿ ಮಣಿಪಾಲ , ಶ್ರೀಮತಿ ಲಕ್ಷ್ಮಿ ರಾಜೇಶ್ ನಾಯಕ್ ಅಜೇಕಾರು ರವಿಜ , ಉಪಸ್ಥಿತರಿದ್ದರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್ ವಂದನಾರ್ಪಣೆ ಗೈದರು.




ಶ್ರದ್ಧಾಂಜಲಿ ಸಭೆ ಬಳಿಕ ಉಡುಪಿ ಜಿಲ್ಲಾ ಘಟಕದ ಸಭೆ ನಡೆಯಿತು ಆ ಸಭೆಯಲ್ಲಿ ನೂತನವಾಗಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಗೆ ದೀಕ್ಷಿತ್ , ಹರಿಣಿ ಕಟಪಾಡಿ, ಸಂಪತ್ ಹೆಜಮಾಡಿ, ಪ್ರಶಾಂತ್ ಹೆಬ್ರಿ , ತಿಲಕ್ ,ಪುಷ್ಪಲತಾ ನೇಜರು ಮತ್ತಿತರರು ಸೇರ್ಪಡೆ ಗೊಂಡರು. ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಸಂಘಟನೆ ಶಾಲು ಹೊದಿಸಿ ಬರಮಾಡಿಕೊಂಡರು