ಮಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ತುಳು ಚಿತ್ರ ‘ಪಿದಾಯಿ’ ಸೆಪ್ಟೆಂಬರ್ 12ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಟಿ ರೂಪಾ ವರ್ಕಾಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ನಮ್ಮ ಕನಸು’ ಬ್ಯಾನರ್ನಲ್ಲಿ ಕೆ. ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ ರಚಿಸಿರುವುದು ರಮೇಶ್ ಶೆಟ್ಟಿಗಾರ್. ಚಿತ್ರವು ಕೊಲ್ಕತ್ತಾ, ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆಗೊಂಡಿದೆ. ಜೊತೆಗೆ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಪಿದಾಯಿ’ ಚಿತ್ರವು ಭಾರತೀಯ ಹಾಗೂ ಕನ್ನಡ ವಿಭಾಗಗಳಲ್ಲಿ ಸ್ಪರ್ಧೆಗಿಳಿದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗಳಿಸಿದೆ. ಇದು ತುಳು ಚಿತ್ರರಂಗಕ್ಕೆ ಬಹುಮಾನೀಯ ಸಾಧನೆ.

ಅಭಿನಯ ತಾರಾಗಣ: ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವರ್ ಅವರು ಅಭಿನಯಿಸಿದ್ದು, ಅವರೊಂದಿಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಡಿ.ಬಿ.ಸಿ ಶೇಖರ್, ಅನಿತಾ ಚಂದ್ರಶೇಖರ್ ಮತ್ತು ಬಾಲಕಲಾವಿದರಾದ ಮೋನಿಶ್, ತಿಷ, ಧ್ರುವ, ನಿಹಾ, ಕುಶಿ ಶೇಖರ್ ನಟಿಸಿದ್ದಾರೆ.

ಛಾಯಾಗ್ರಹಣ: ರಾಷ್ಟ್ರ ಪ್ರಶಸ್ತಿ ವಿಜೇತ ಜೀಟಿಗೆ ಛಾಯಾಗ್ರಾಹಕರಾದ ಉಣ್ಣಿ ಮಾಡವೂರ್
ಸಂಕಲನ: ಸುರೇಶ್ ಅರಸ್ – ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಸಂಪಾದಕರು
ಸಂಭಾಷಣೆ: ರಮೇಶ್ ಶೆಟ್ಟಿಗಾರ್ ಮತ್ತು ಡಿ.ಬಿ.ಸಿ ಶೇಖರ್
ಚಿತ್ರೀಕರಣ ಸ್ಥಳ: ದ.ಕ. ಜಿಲ್ಲೆಯ ಮುದಿಪು ಹಾಗೂ ಮಂಜೇಶ್ವರ ಗಡಿಪ್ರದೇಶಗಳು
ಸಾಹಿತ್ಯ ಹಾಗೂ ಸಂಗೀತ: ಚಿತ್ರಕ್ಕೆ ಸಾಹಿತಿ ಪದ್ಮಶ್ರೀ ಕೃತವಮ್ ದಾಮೋದರನ್ ನಂಬೂದಿರಿ, ಸುಧೀರ್ ಅತ್ತಾವರ (ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ) ಮತ್ತು ಕುಶಾಲಾಕ್ಷಿ ಕಣ್ವತೀರ್ಥ (ತುಳು ಅಕಾಡೆಮಿ ಪ್ರಶಸ್ತಿ ವಿಜೇತೆ) ಸಾಹಿತ್ಯ ನೀಡಿದ್ದಾರೆ. ಸಂಗೀತ ಸಂಯೋಜನೆ ಅಜಯ್ ನಂಬೂದಿರಿ ಅವರಿಂದ.
ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಅವರು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡು ಹಾಡಿರುವುದು. ಜೊತೆಗೆ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್, ಭಾವನಾ ಮುಂತಾದವರು ಹಿನ್ನಲೆ ಗಾಯನ ಮಾಡಿದ್ದಾರೆ. ಹಿನ್ನಲೆ ಸಂಗೀತ: ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ದೀಪಾಂಕುರನ್.
ಇತರೆ ತಾಂತ್ರಿಕ ತಂಡ:
ಕಲಾ ನಿರ್ದೇಶನ: ರಾಜೇಶ್ ಬಂದ್ಯೋಡ್
ವಸ್ತ್ರ ವಿನ್ಯಾಸ: ಮೀರಾ ಸಂತೋಷ್
ಮೇಕಪ್: ಬಿನೋಯ್ ಕೊಲ್ಲಮ್
ಸಹ ನಿರ್ದೇಶಕರು: ವಿಘ್ನೇಶ್ ಕುಲಾಲ್, ಗಿರೀಶ್ ಆಚಾರ್, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ
ಸ್ಥಿರ ಛಾಯಾಗ್ರಹಣ: ದೀಪಕ್ ಉಪ್ಪಳ
ತಂಡ ನಿರ್ವಹಣೆ: ರವಿ ವರ್ಕಾಡಿ
ಸಂಸ್ಕೃತಿ ಸಮ್ಮಿಲನ: ತುಳುನಾಡಿನ ಸಾಂಸ್ಕೃತಿಕ ಅಂಶವಾಗಿ ಕುಣಿತ ಭಜನೆ ಯನ್ನು ಮೊದಲ ಬಾರಿಗೆ ಚಿತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಈ ಭಜನೆಗೆ ಯೋಗೀಶ್ ಎ.ಎಸ್ ಮತ್ತು ಶಶಿರಾಜ್ ಕಾವೂರ ಸಾಹಿತ್ಯ ಬರೆದಿದ್ದು, ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು: ನಿರ್ದೇಶಕ ಸಂತೋಷ್ ಮಾಡ, ಪುಷ್ಪರಾಜ್ ಬೊಳ್ಳಾರ್, ಡಿ.ಬಿ.ಸಿ ಚಂದ್ರಶೇಖರ್, ಮೀನಾಕ್ಷಿ ರಾಮಚಂದ್ರ ಮತ್ತು ಬಾಲ ಕಲಾವಿದ ಖುಷಿ ಉಪಸ್ಥಿತರಿದ್ದರು.
