ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ 2026 28 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಎಸ್ ಡಿ ಎಮ್ ಸಭಾಂಗಣದಲ್ಲಿ ಇಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ್ ಉದ್ಘಾಟಿಸಿದರು.

ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಿರಿಯ ಹೈಕೋರ್ಟ್ ವಕೀಲರಾದ ಪಿಪಿ ಹೆಗಡೆಯವರು ವಿದ್ಯಾರ್ಥಿವೇತನ ಚೆಕ್ಕನ್ನು ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಲೋಗೋವನ್ನು ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ಶ್ರೀ ರೋಹಿತ್ ರಾವ್ ರವರು ನೆರವೇರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ್ ರವರು ಭಾಗವಹಿಸಿದ್ದರು ಅತಿಥಿಗಳಾಗಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ದೇವರಾಜ್ ಕೆ ರವರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರನಾಥ್ ವಹಿಸಿದ್ದರು. ಅತಿಥಿಗಳನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರರವರು ಸ್ವಾಗತಿಸಿದರು ಸಂಘದ ಕುರಿತು ಪ್ರಾಸ್ತಾವಿಕ ಭಾಷಣವನ್ನು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ದಿನಕರ್ ಶೆಟ್ಟಿ ಅವರು ಮಾಡಿದರು.

ಸಂಘದ ಉಪಾಧ್ಯಕ್ಷರಾದ ಉಮೇಶ್ ಗಟ್ಟಿ ಜೊತೆ ಕಾರ್ಯದರ್ಶಿಯಾದ ಶ್ರೀಮತಿ ಜಯಶ್ರೀ ಹಟ್ಟಿಹಳ್ಳಿ ಸಂಚಾಲಕರಾದ ವಿನೋದ್ ಕುಮಾರ್ ಶ್ರೀ ಅಶ್ವಿನ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ ಅನ್ನಪೂರ್ಣ ಶೇಟ್ ಉಪಸ್ಥಿತರಿದ್ದರು ಶ್ರೀ ಅಶ್ವಿನ್ ರವರು ಧನ್ಯವಾದಗಳು ಅರ್ಪಿಸಿದರು.


