ದಿನಾಂಕ 16-08-2025 ರಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರನ್ನು ಮಂಗಳೂರಿನ ಕೇಂದ್ರೀಯ ಮಂಡಳಿ ಕಚೇರಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಜೊತೆ ಭೇಟಿ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆ ಗುರುತಿಸಿ. ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದು. ತುಳುನಾಡ ರಕ್ಷಣಾ ವೇದಿಕೆ ಸೇರ್ಪಡೆ ಗೊಂಡ ಬಳಿಕ ತುಳುನಾಡಿನ ದೈವ ದೇವರುಗಳ ದಯೆಯಿಂದ ಬಹಳಷ್ಟು ಗೆಲುವು ಮತ್ತು ಪ್ರಶಸ್ತಿಗಳು ನನ್ನ ಹುಡುಕಿಕೊಂಡು ಬಂದಿವೆ. ಹೆಚ್ಚಿನ ಬೆಂಬಲ ಕೂಡ ದೊರೆಯುತ್ತಿದೆ. ಬಹಳಷ್ಟು ಜನರು ಸಂಘಟನೆಗೆ ಸೇರುತ್ತಿದ್ದಾರೆ. ಈ ಹಿಂದೆ ನನ್ನ ಏಳಿಗೆಗೆ ತನ್ನ ಜೊತೆ ನಿಂತು ಬೆಂಬಲಿಸಿ, ಪ್ರೋತ್ಸಾಹಿಸಿ, ಆಶೀರ್ವಾದಿಸಿದೀರಿ ಇನ್ನೂ ಮುಂದಕ್ಕೂ ಸದಾ ಆಶೀರ್ವಾದವಿರಲಿ ಎಂದು ಸತೀಶ್ ಖಾರ್ವಿ ಯವರು ಯೋಗೀಶ್ ಶೆಟ್ಟಿ ಜಪ್ಪು ರವರ ಬಳಿ ತಿಳಿಸಿದಾಗ “ತಾವು ತಮ್ಮ ಪ್ರಾಮಾಣಿಕ ಪ್ರಯತ್ನ ದಿಂದಾಗಿ ನೀವು ಇಷ್ಟು ಎತ್ತರಕ್ಕೆ ಬೆಳೆದಿದ್ದೀರಿ ತಾವು ಇದೇ ರೀತಿ ಮುಂದುವರೆದರೆ ದೇವರ ಆಶೀರ್ವಾದ ಮತ್ತು ಜನರ ಪ್ರಾರ್ಥನೆಯಿಂದ ಇನ್ನಷ್ಟು ಯಶಸ್ಸು ಗಳಿಸುವಿರಿ” ಎಂದು ಯೋಗಿಶ್ ಶೆಟ್ಟಿ ಜಪ್ಪು ರವರು ಹೃದಯ ಪೂರ್ವಕ ಶುಭ ಹಾರೈಸಿದರು.


