ಮಂಗಳೂರು: ಸಹಕಾರ ಸಪ್ತಾಹ–2025ರ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆ ಸಂಯುಕ್ತಾಶ್ರಯದಲ್ಲಿ, ಮಂಗಳೂರಿನ ಉರ್ವಸ್ಟೋರ್ ತುಳುಭವನದ ‘ಸಿರಿ ಚಾವಡಿ’ಯಲ್ಲಿ ನವೆಂಬರ್ 16ರಂದು ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು. ವೇದಿಕೆಯ ಸ್ಥಾಪಕ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಮಾಜಿ ಸಚಿವ ಶ್ರೀ ಕೃಷ್ಣ ಪಾಲೆಮಾರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಧರ್ಮವಲೋಕನದ ಗಡಿಕಾರರು ಮತ್ತು ಅಧ್ಯಕ್ಷರಾದ ಶ್ರೀ ದೋಣಿಂಜೆ ಗುತ್ತು ಪ್ರಮೋದ್ ಕುಮಾರ್ ರೈ ಸೇರಿದಂತೆ ಪ್ರಮುಖ ಗಣ್ಯರು ಹಾಜರಿದ್ದರು. ಪರಿಶಿಷ್ಟ ಜಾತಿ–ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ಮೋಹನಂಗಯ್ಯ ಸ್ವಾಮಿ, ಕೆದಂಬಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಶ್ರೀ ಕಿರಣ್ ಬುಡ್ಲೆಗುತ್ತು, ವೇದಿಕೆಯ ವಕೀಲರ ಘಟಕ ಅಧ್ಯಕ್ಷ ಶ್ರೀ ರಾಘವೇಂದ್ರ ರಾವ್ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಮುಂತಾದವರೂ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಕಾರಿ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಸಾಧಕರಿಗೆ ಈ ಬಾರಿ 5 ತೌಳವ ಸಹಕಾರಿ ಮಾಣಿಕ್ಯ, 5 ತೌಳವ ಸಹಕಾರಿ ರತ್ನ, 2 ತೌಳವ ಸಹಕಾರಿ ಸಾಧಕ ಗೌರವ ಹಾಗೂ 4 ವಿಶೇಷ ತೌಳವ ಸನ್ಮಾನಗಳನ್ನು ಪ್ರದಾನ ಮಾಡಲಾಗಿತ್ತು.
ಉಪ್ಪುರು ರಮೇಶ್ ಶೆಟ್ಟಿ ಅವರಿಗೆ ವಿಶೇಷವಾಗಿ ಗೌರವ ಪ್ರದಾನ
ಸಮಾರಂಭದಲ್ಲಿ ಹಾಜರಾಗಲು ಸಾಧ್ಯವಾಗದ ಉಪ್ಪುರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ (ಉಪ್ಪುರು) ರವರಿಗೆ ‘ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ’ಯನ್ನು ನವೆಂಬರ್ 19ರಂದು ಉಡುಪಿ ಉಪ್ಪುರು ವ್ಯವಸಾಯ ಸಹಕಾರಿ ಸಂಘದ ಕಚೇರಿಯಲ್ಲಿ ವಿಶೇಷವಾಗಿ ಪ್ರದಾನ ಮಾಡಲಾಯಿತು. ಸಂಘದ ನಿರ್ದೇಶಕರು, ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪತ್ರ, ಫಲಕ, ಶಾಲು ಮತ್ತು ಫಲಪುಷ್ಪ ನೀಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ಉಪಾದ್ಯಕ್ಷ ಜಯ ಪೂಜಾರಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಉಪಾದ್ಯಕ್ಷ ಉಮೇಶ್ ಶೆಟ್ಟಿ , ಬ್ರಹ್ಮಾವರ ತಾಲೂಕು ಪ್ರದಾನ ಕಾರ್ಯದರ್ಶಿ ಶರತ್ ಅರೂರ್, ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ತ, ಮೊದಲಾದವರು ಉಪಸ್ಥಿತರಿದ್ದರು.





