ಬಂಟ್ವಾಳ: ಸಮಾಜ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಗೌರವ ಪಡೆದು 25 ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ರಕ್ತೇಶ್ವರಿ ಯುವಕ ಮಂಡಲ ನೇರಂಬೋಳು ಬಂಟ್ವಾಳ
ತುಳುಧ್ವಜ ಅರಳಿಸಿ, ತುಳು ಶಾಲನ್ನ ಹೊದಿಸಿ ತುಳು ಭಾಷಾ ಜನಜಾಗೃತಿ ಮೂಡಿಸಿದರು.ಸಮಾಜ ಮುಖಿ ಸೇವೆಗಾಗಿ ಕಳೆದ 25 ವರ್ಷಗಳಿಂದ ಹೆಣಗಿದ ಯುವಕ ಮಂಡಲದ ನಾಯಕರುಗಳನ್ನ ಸನ್ಮಾನಿಸಲಾಯಿತು. ಸಾಮಾಜಿಕ ಹೋರಾಟಗಾರ ಕನ್ನಡ ಕಟ್ಟೆ ಅಧ್ಯಕ್ಷ ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ ಮುಖ್ಯಸ್ಥ ಅಣ್ಯಯ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಬೀಡಿ ಉದ್ಯಮಿ ಮೋನಪ್ಪ ಮೂಲ್ಯ ನಿರಂಬೋಳು , ಯಕ್ಷ ಗುರುಗಳು ಮತ್ತು ಭಾಗವತರು ಸಂಜೀವ ಕಜೆ ಪದವು , ಕುಂಜಿರ ಗುರುಸ್ವಾಮಿ ಚಾರ್ಮಾಡಿ, ನಾಟಿ ವೈದ್ಯ ಸಂಜೀವ ಮೂಲ್ಯ ನೇರಂಬೋಳು, ರವರಿಗೆ ಸಭೆಯಲ್ಲಿ ಸನ್ಮಾನ ನಡೆಯಿತು.
ಹಲವಾರು ಗಣ್ಯರ ಉಪಸ್ಥಿತಿ ಯೊಂದಿಗೆ ಸತ್ಯನಾರಾಯಣ ಪೂಜೆ ಸಾರ್ವಜನಿಕ ಅನ್ನಸಂಪರ್ಪಣೆ ನಡೆಯಿತು.
ಮಹಿಷ ಮರ್ದಿನಿ ಯಕ್ಷಗಾನ ಬಯಲಾಟ ಕೋಟಿ ಚೆನ್ನಯ ತುಳು ಯಕ್ಷಗಾನ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಿತು.
ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು ನಡೆಯಿತು.


