ಬಂಟ್ವಾಳ: ಹಾಲು ಉತ್ಪಾದಕ ಸಂಘ ವಾಮದಪದವಿನ ಅಧ್ಯಕ್ಷ ಗೋಪಾಲ ಕೃಷ್ಣ ಚೌಟ ಮತ್ತು ಹಾಲು ಉತ್ಪಾದಕ ಸಂಘದ ಸಿಬ್ಬಂದಿ ಜೊತೆಗೂಡಿ ಸಂಘಕ್ಕೆ ಹಾಲು ತರುವ ರಂಜಿತ್ ಗಟ್ಟಿ ಎನ್ನುವವರಿಗೆ ಹಲ್ಲೆ ನಡೆದಿದೆ.
ರಂಜಿತ್ ಗಟ್ಟಿ ಅರ್ಜಿ ಸಲ್ಲಿಸಿ ಕೆಲವು ತಿಂಗಳು ಆದರೂ ನನ್ನ ಸಬ್ಸಿಡಿ ಬರಲಿಲ್ಲಾ ಎಂದು ಸಂಘದ ಸಿಬ್ಬಂದಿಯಲ್ಲಿ ಕೇಳಿದಾಗ ಕೋಪ ಕೊಂಡ ಸಿಬ್ಬಂದಿ ಅಸಭ್ಯ ರೀತಿಯಲ್ಲಿ ವರ್ತಿಸಿದರು ಆ ಸಮಯದಲ್ಲಿ ಸಂಘದ ಅಧ್ಯಕ್ಷ ಗೋಪಾಲ ಕೃಷ್ಣರು ಸಂಘಕ್ಕೆ ಬಂಡರು ಅವರಲ್ಲಿ ರಂಜಿತ್ ಗಟ್ಟಿ ಕೇಳಿದರು ಸಬ್ಸಿಡಿ ಬರಲಿಲ್ಲಾ ಕಾರಣ ಏನೆಂದು ಅದಕ್ಕೆ ಕೋಪಗೊಂಡ ಸಂಘದ ಅಧ್ಯಕ್ಷರು ಉಡಾಪೆ ಉತ್ತರ ಕೊಟ್ಟರು ಇದರಿಂದ ಸಂಘದ ಸದಸ್ಯ ರಂಜಿತ್ ಗಟ್ಟಿ ನಾವು ದಿನವಿಡಿ ಕಷ್ಟಪಟ್ಟು ದುಡಿದು ಸಂಘಕ್ಕೆ ಹಾಲು ತರುವುದು ನೀವು ಸಂಘಕ್ಕೆ ಹಾಲು ಕೊಡುವುದಿಲ್ಲಾ ಆ ಕಾರಣದಿಂದ ನಿಮಗೆ ಹಾಲು ಉತ್ಪಾಕರ ಕಷ್ಟ ಗೊತ್ತಿಲ್ಲಾ ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದು ಕೊಂಡರು ಇದಕ್ಕೆ ಉತ್ತರ ಕೊಡಲು ಸಾಧ್ಯ ಆಗದೇ ಅಧ್ಯಕ್ಷರು ರಂಜಿತ್ ಗಟ್ಟಿಯವರ ತಲೆಗೆ ಕಬ್ಬಿಣದ ರಾಡಿನಿಂದ ರಂಜಿತ್ ಗಟ್ಟಿಯವರ ತಲೆಗೆ ಬಡಿದಿದ್ದಾರೆ ಈಗ ಬಂಟ್ಟಾಳ ಠಾಣೆಯಲ್ಲಿ ದೂರೂ ದಾಖಲಾಗಿದೆ.