ಪಚ್ಚನಾಡಿಯಲ್ಲಿ ಹೊಸತಾಗಿ ಕಸ ಸಂಗ್ರಹ ಕ್ಕೆ ಅನುಮತಿ. ವಾರ್ಡ್ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತವಾಗಿದೆ
ಪಚ್ಚನಾಡಿ ಮುಖ್ಯ ರಸ್ತೆಗೆ ತಾಗಿಕೊಂಡು ಇರುವ ಸರ್ಕಾರದ ಹೊಸ ಜಾಗದಲ್ಲಿ ಮತ್ತೊಂದು ಕಸದ ಕೇಂದ್ರ ಮಾಡಳು ಮಂಗಳೂರು ಮಹಾನಗರಪಾಲಿಕೆ ಅನುಮತಿ ನೀಡಿದೆ.
ಸುಮಾರು 40 ಎಕರೆ ಸ್ಥಳದಲ್ಲಿ ತುಂಬಿರುವ ಕಸ ತೆಗೆಯುತ್ತಿದ್ದಾರೆ. ಅಲ್ಲಿ ಎಕರೆಗಟ್ಟಲೆ ಸ್ಥಳ ಇರುವಾಗ, ಪುನಹ ಹೊಸ ಸ್ಥಳದಲ್ಲಿ ಕಸದ ಕೇಂದ್ರ ಮಾಡುವ ಮಹಾನಗರ ಪಾಲಿಕೆ ನಿರ್ಧಾರವನ್ನು, ಇಂದು ನಡೆದ ಕಾಂಗ್ರೆಸ್ ವಾರ್ಡ್ ಸಮಿತಿ ಸಭೆಯಲ್ಲಿ ತೀವ್ರವಾಗಿ ವಿರೋಧಿಸುವ ನಿರ್ಣಯ ಕೈಗೊಳ್ಳಲಾಯಿತು. ಸಾರ್ವಜನಿಕರ ಸಹಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಮತ್ತು, ಜಿಲ್ಲೆಯ ಹಿರಿಯ ಹೋರಾಟಗಾರ ಎಂ ಜಿ ಹೆಗಡೆ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ನಿರ್ಧಾರ ಮಾಡಲಾಯಿತು.
ಈಗಾಗಲೇ ಇರುವ 40 ಎಕ್ರೆ ಸ್ಥಳದಲ್ಲೇ ಕಸ ವಿಲೇವಾರಿ ಆಗಬೇಕು, ನೂತನವಾಗಿ ಗುರುತಿಸಿದ ಸ್ಥಳದಲ್ಲಿ, ಮಿನಿ ಮಾರುಕಟ್ಟೆ, ನಾಡ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬೇಕು ಎಂಬ ಬೇಡಿಕೆ ಇಡಲಾಗಿದೆ.
ಕಾಂಗ್ರೆಸ್ ರಾಜ್ಯ ವಕ್ತಾರ ಎಂ ಜಿ ಹೆಗಡೆ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಮಿನೇಜಸ್, ಮುಖಂಡರಾದ ಸಜಿತ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಲೂಸಿ ಪಿಂಟೋ,
ಸುಧಾಕರ್, ಮ್ಯಾಕ್ಸಿ೦ ಡೀಕುನ್ಹ, ಶಂಕರ್, ಪ್ರವೀಣ್, ರವಿ ಭಟ್
ಆನಂದ, ವಿರೇಶ್
ಹಾಜರಿದ್ದರು.
