Close Menu
ತುಳುನಾಡ ಸೂರ್ಯತುಳುನಾಡ ಸೂರ್ಯ
    What's Hot

    ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದ ಪ್ರವಾಸಿಗರು

    9 May 2025

    ಭಾರತ ದಾಳಿಗೆ ಪಾಕಿಸ್ತಾನ ತತ್ತರ

    8 May 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ನಾಡು ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ

    8 May 2025
    Facebook WhatsApp Telegram
    Trending
    • ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದ ಪ್ರವಾಸಿಗರು
    • ಭಾರತ ದಾಳಿಗೆ ಪಾಕಿಸ್ತಾನ ತತ್ತರ
    • ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ನಾಡು ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ
    • ತೌಲೊ ಜಿಯನ್ಸೂವಿನಲ್ಲಿ ಕು.ಮನ್ವಿತ ಮನೋಜ್ ಕುಮಾರ್ ಗೆ ಚಿನ್ನದ ಪದಕ
    • Kannada Sangha Bahrain has elected a new Executive Committee
    • ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕರುನಾಡ ಕಾಯಕ ಯೋಗಿ ಸದ್ಭಾವನ ರಾಜ್ಯಪ್ರಶಸ್ತಿಗೆ ಆಯ್ಕೆ
    • ಸಿಂಧೂರ ಆಪರೇಷನ್ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ.
    • ಉಲಾಯಿ ಪಿದಾಯಿ ಜುಗಾರಿ ಆಟ : ಐದು ಮಂದಿ ಉಲಾಯಿ…!!
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಕ್ರೀಡೆ
    Facebook YouTube
    ತುಳುನಾಡ ಸೂರ್ಯತುಳುನಾಡ ಸೂರ್ಯ
    Friday, May 9
    • ಮುಖ ಪುಟ
    • ಸ್ಥಳೀಯ
    • ರಾಜ್ಯ
    • ದೇಶ-ವಿದೇಶ
    • ಮನೋರಂಜನೆ
    • ಅಪರಾಧ
    • ತಂತ್ರಜ್ಞಾನ
    • ಕ್ರೀಡೆ
    • ಇತರೆ
    • ಬ್ರೇಕಿಂಗ್ ನ್ಯೂಸ್ 🔥
    ತುಳುನಾಡ ಸೂರ್ಯತುಳುನಾಡ ಸೂರ್ಯ
    Home » ಕಾಡು ಬಿಟ್ಟು ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದ ನಕ್ಸಲರು

    ಕಾಡು ಬಿಟ್ಟು ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದ ನಕ್ಸಲರು

    Tulunada SuryaBy Tulunada Surya8 January 2025Updated:8 January 2025 ದೇಶ-ವಿದೇಶ No Comments2 Mins Read
    Share
    Facebook WhatsApp
    Share on:

    6 ಮಂದಿ ನಕ್ಸಲೀಯರು ಶಸಾಸ್ತ್ರಗಳನ್ನು ತ್ಯಜಿಸಿದ್ದು, ಸರ್ಕಾರದ ಶರಣಾಗತಿ ಪ್ಯಾಕೇಜ್ ಒಪ್ಪಿಕೊಂಡು ಶರಣಾಗಿದ್ದಾರೆ. ಕಾಡು ಬಿಟ್ಟು ರಾಜಧಾನಿ ” ಬೆಂಗಳೂರಿನಲ್ಲಿ ನಕ್ಸಲ್ ರ ಕರ್ನಾಟಕದ ‘ರಕ್ತ ಚರಿತ್ರೆ’ ಇತಿಹಾಸದಲ್ಲಿ ಬುಧವಾರ ಮಹತ್ವದ ದಿನವಾಗಿದೆ

    ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯದ ನಕ್ಸಲರಾದ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲದ ಸುಂದರಿ, ಮಾರಪ್ಪ ಅರೋಳಿ, ವನಜಾಕ್ಷಿ ಬಾಳೆಹೊಳೆ ಹಾಗೂ ಕೇರಳದ ವೈನಾಡಿನ ಎನ್. ಜೀಶಾ ಹಾಗೂ ತಮಿಳುನಾಡಿನ ಕೆ. ವಸಂತ್ ಅವರು ಹಸಿರು ಬಟ್ಟೆ ಕಳಚಿಟ್ಟು, ಕೆಂಪು ಬಾವುಟ ಕೆಳಗಿಟ್ಟು ಶರಣಾದರು.

    ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಮರಳಿದ್ದು, ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗುವ ಕಾಲ ಸಮೀಪಿದಂತಾಗಿದೆ.

    ಈ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸರು ಶರಣಾದ ನಕ್ಸಲರನ್ನು ತಮ್ಮ ವಶಕ್ಕೆ ಪಡೆಯಲಿದ್ದು, ಕೋರ್ಟ್‌ಗೆ ಹಾಜರುಪಡಿಸಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಿದ್ದಾರೆ. ಇದರೊಂದಿಗೆ ಹಲವು ದಶಕಗಳಿಂದ ಸರ್ಕಾರಕ್ಕೆ ತಲೆ ನೋವಾಗಿದ್ದ ನಕ್ಸಲ್ ಚಳವಳಿ ಬಹುತೇಕ ಅಂತ್ಯವಾಗಿದೆ. ಶರಣಾದ ನಕ್ಸಲರ ಪೈಕಿ ಮುಂಡಗಾರು ಲತಾ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದವರು. ಹಲವು ವರ್ಷಗಳಿಂದ ಇವರು ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಇವರ ವಿರುದ್ಧ 85 ಪ್ರಕರಣಗಳಿವೆ.

    ನಕ್ಸಲರು ಕಳೆದ ಮೂರು ದಿನಗಳಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ಶರಣಾಗತಿ ಕುರಿತು ಮಾತುಕತೆಯನ್ನು ಚಿಕ್ಕಮಗಳೂರು ಕಾಡಿನಲ್ಲಿ ನಡೆಸುತ್ತಿದ್ದರು.

    ಬುಧವಾರ ಅವರುಗಳು ಶರಣಾಗಲು ದಿನಾಂಕ ನಿಗದಿ ಮಾಡಲಾಯಿತು. ಮೊದಲು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶರಣಾಗಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಬುಧವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ಪೊಲೀಸರ ಭದ್ರತೆಯಲ್ಲಿ ಬೆಂಗಳೂರು ನಗರಕ್ಕೆ ಆಗಮಿಸಿದ ನಕ್ಸಲರು, ಮುಖ್ಯಮಂತ್ರಿಗಳ ಮುಂದೆ ಶರಣಾಗಿದ್ದಾರೆ.

    ಪೊಲೀಸರು ಅವರನ್ನು ವಶಕ್ಕೆ ಪಡೆಯಲಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ. ನಕ್ಸಲರನ್ನು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೋರ್ಟ್‌ ಮುಂದೆ ಹಾಜರುಪಡಿಸಬೇಕಿದೆ.

    ಡಿಸೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ಭೇಟಿ ಮಾಡಿದ್ದರು . ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿ ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರು ಶ್ರೀಧರ್, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮು ಸೇರಿ ಒಟ್ಟು 14 ಮಂದಿ ನಕ್ಸಲೀಯರು ಸಮಾಜದ ಮುಖ್ಯ ವಾಹನಿಗೆ ಮರಳಿದ್ದರು.

    ಮೂಲಗಳ ಪ್ರಕಾರ ರಾಜ್ಯದಲ್ಲಿ ಇನ್ನೂ ಓರ್ವ ನಕ್ಸಲ್ ಮಾತ್ರ ಶರಣಾಗತಿಗೆ ಬಾಕಿ ಉಳಿದಿದ್ದು. ಆತನ ಶರಣಾಗತಿಗೆ ಪ್ರಯತ್ನ ನಡೆಸಲಾಗುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಎರಡೂವರೆ ದಶಕಗಳ ಕಾಲದ ನಕ್ಸಲ್ ಚಳವಳಿ ಅಂತ್ಯ ಕಂಡಂತಾಗುತ್ತದೆ.

    Share on:
    Bangalore Mukyamanthri Naxal Tulunada surya

    Keep Reading

    ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದ ಪ್ರವಾಸಿಗರು

    ಭಾರತ ದಾಳಿಗೆ ಪಾಕಿಸ್ತಾನ ತತ್ತರ

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ನಾಡು ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ

    Editors Picks
    Latest Posts
    Facebook YouTube

    News

    • ಅಪರಾಧ
    • ಇತರೆ
    • ಕ್ರೀಡೆ
    • ತಂತ್ರಜ್ಞಾನ
    • ದೇಶ-ವಿದೇಶ

    NEWS

    • ಬ್ರೇಕಿಂಗ್ ನ್ಯೂಸ್
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಮನೋರಂಜನೆ
    • ರಾಜ್ಯ

    TAGS

    • Featured
    • Top News

    Quick Links

    • Home
    • About
    • Contact Us
    • Privacy Policy
    • Terms & Conditions

    ©2024 Tulunada Surya. Developed by DMP

    Type above and press Enter to search. Press Esc to cancel.