ಮಂಗಳೂರು : ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವವು ಏಪ್ರಿಲ್ 9 ರಿಂದ 11 ರವರೆಗೆ ಶೃದ್ಧಾ ಭಕ್ತಿಯಿಂದ ನಡೆಯಲಿದೆ.
ಏಪ್ರಿಲ್ 05-04-2025ನೇ ಶನಿವಾರ ಮಜಿ, ತುಂಬೆಯಲ್ಲಿ ಜರಗಲಿರುವ ಗೊನೆ ಮುಹೂರ್ತದಿಂದ ಮೊದಲ್ಗೊಂಡು ಮೀನ ಮಾಸ ದಿನ 26 ಸಲುವ ತಾ. 09-04-2025 ನೇ ಬುಧವಾರದಿಂದ ಮೀನ ಮಾಸ ದಿನ 28 ಸಲುವ ತಾ. 11-04-2025ನೇ ಶುಕ್ರವಾರ ಪರ್ಯಂತ ಶ್ರೀ ಕ್ಷೇತ್ರದಲ್ಲಿ ನಡಾವಳಿ ಉತ್ಸವವು ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮತ್ತು ಶ್ರೀ ಭಗವನ್ನಾಮ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಬೆಳಗ್ಗೆ ಭಂಡಾರ ಆರೋಹಣವಾಗಿ ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಹೋರಾಡಲಿದ್ದು . ಮಧ್ಯಾಹ್ನ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನೆರವೇರಲಿದೆ. ರಾತ್ರಿ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಲಿದ್ದು . ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು ಉಪಸ್ಥಿತರಿರುವರು .
ಎಂದಿನಂತೆ ಮಧ್ಯಾಹ್ನ 12.30ಕ್ಕೆ ಶ್ರೀ ಪಾಡಂಗರ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನಡೆಯಲಿದ್ದು ರಾತ್ರಿ 9.30ರಿಂದ ಭೇಟಿಕಳ, ಮೇಲೇರಿಗೆ ಅಗ್ನಿ ಸ್ಪರ್ಶ, ವೀರಸ್ತಂಭ ದರ್ಶನ, ರಾತ್ರಿ 1.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ, ಮುಂಜಾನೆ 4 ಗಂಟೆಗೆ ಕೆಂಡಸೇವೆ ನಡೆಯಲಿದೆ.ಬಳಿಕ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಮಹಾಪೂಜೆ, ರಾತ್ರಿ 9.30ಕ್ಕೆ ಕೆಂಡಸೇವೆ, ಮೂರ್ತಿದರ್ಶನ, ಭಂಡಾರ ಅವರೋಹಣ ನಡೆಯಲಿದೆ.





