ದಿನಾಂಕ 27/07/2025 ರಂದು ಭಾನುವಾರದಂದು ಮುಂಡಾಲ ಸಮಾಜ(ರಿ) ಗುರುಪುರ ಕೈಕಂಬ ಇದರ ವತಿಯಿಂದ ಡಾ . ಬಿ.ಆರ್ ಅಂಬೇಡ್ಕರ್ ಭವನ ಕಂದಾವರ ಪದವು ಇಲ್ಲಿ ಮುಂಡಾಲ ಟ್ರೋಪಿ 2025 , ಪುರುಷರ ವಾಲಿಬಾಲ್ ,ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟಾದ ಕ್ರೀಡಾಕೂಟ ನಡೆಯಿತು. ಪಂದ್ಯಾಟದ ಉದ್ಗಾಟನೆಯನ್ನು ದಯಾನಂದ ಮಾಸ್ಟರ್ ಪಡು ಖ್ಯಾತ ಕ್ರಿಕೆಟ್ ಆಟಗಾರರು ನೇರವೆರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷರಾದ ಶ್ರೀ ಪ್ರದೀಪ್ ಕಾಫಿಕಾಡ್,ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಹೇಶ್ ಅಮೀನ್ ,ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀ ಕೃಷ್ಣ ಕುಳಾಯಿ, ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ ಇದರ ಅಧ್ಯಕ್ಷರಾದ ಶ್ರೀ ಜಯಂತ ಕೊಳಂಬೆ, ವಿವಿದ ತಂಡಗಳ ಸದಸ್ಯರು ,ಹಾಗೂ ಮುಂಡಾಲ ಸಮಾಜ ಭಾಂದವರು ಉಪಸ್ಥಿತರಿದ್ದರು. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು 11 ತಂಡಗಳು ಭಾಗವಹಿಸಿತು,ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ4 ತಂಡಗಳು ಭಾಗವಹಿಸಿತು. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸ್ಕೂಲ್ ಪ್ರೈಂಡ್ಸ್ ತೋಕೂರು ಪಡೆಯಿತು. ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಟೀಮ್ ಪೈರ್ ಹಾಕ್ಸ್ ಮಂಗಳೂರು,ಹಾಗೂ ದ್ವಿತೀಯ ಸ್ಥಾನವನ್ನು ಶ್ರೀ ಒಂಕಾರೇಶ್ವರಿ ತೋಕೂರು ಪಡೆಯಿತು. ಭಾಗವಹಿಸಿದ ಎಲ್ಲಾ ತಂಡ ಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಹಾಗೂ ದಿನಾಂಕ 03/08/2025 ರ ಬಾನುವಾರದಂದು ಮುಂಡಾಲ ಸಮಾಜ(ರಿ) ಗುರುಪುರ ಕೈಕಂಬ ಇದರ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನ ಕಂದಾವರ ಪದವು ಇಲ್ಲಿ ಆಟ-ಊಟ- ಕೂಟ ಕಾರ್ಯಕ್ರಮ ನಡೆಯಲಿರುವುದು
