Close Menu
ತುಳುನಾಡ ಸೂರ್ಯತುಳುನಾಡ ಸೂರ್ಯ
    What's Hot

    ಉಡುಪಿ: ಹಿರಿಯ ಸಾಹಿತಿ, ನಾಟಕಕಾರ, ಚಲನಚಿತ್ರ ನಟ, ನಿರ್ಮಾಪಕ , ನಿರ್ದೇಶಕ ಸುಧಾಕರ್ ಬನ್ನಂಜೆ ಯವರಿಗೆ ಸನ್ಮಾನ

    1 June 2025

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ನೂತನ ಮಹಿಳಾ ಅಧ್ಯಕ್ಷರಾಗಿ ಸುನಂದ ಕೋಟ್ಯಾನ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಪೂಜಾರಿ ಹಾವಂಜೆ ಮತ್ತು ಜೊತೆ ಕಾರ್ಯದರ್ಶಿಯಾಗಿ ಪ್ರೀತಮ್ ಡಿಸೋಜಾ ಆಯ್ಕೆ.

    1 June 2025

    ಮೂಡುಬಿದಿರೆ: ಜೈನಮಠದಲ್ಲಿ ಶ್ರುತ ಪಂಚಮಿ ಆಚರಣೆಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನ ಶ್ರುತ ಪಂಚಮಿ: ಭಟ್ಟಾರಕ ಸ್ವಾಮೀಜಿ

    1 June 2025
    Facebook WhatsApp Telegram
    Trending
    • ಉಡುಪಿ: ಹಿರಿಯ ಸಾಹಿತಿ, ನಾಟಕಕಾರ, ಚಲನಚಿತ್ರ ನಟ, ನಿರ್ಮಾಪಕ , ನಿರ್ದೇಶಕ ಸುಧಾಕರ್ ಬನ್ನಂಜೆ ಯವರಿಗೆ ಸನ್ಮಾನ
    • ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ನೂತನ ಮಹಿಳಾ ಅಧ್ಯಕ್ಷರಾಗಿ ಸುನಂದ ಕೋಟ್ಯಾನ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಪೂಜಾರಿ ಹಾವಂಜೆ ಮತ್ತು ಜೊತೆ ಕಾರ್ಯದರ್ಶಿಯಾಗಿ ಪ್ರೀತಮ್ ಡಿಸೋಜಾ ಆಯ್ಕೆ.
    • ಮೂಡುಬಿದಿರೆ: ಜೈನಮಠದಲ್ಲಿ ಶ್ರುತ ಪಂಚಮಿ ಆಚರಣೆಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನ ಶ್ರುತ ಪಂಚಮಿ: ಭಟ್ಟಾರಕ ಸ್ವಾಮೀಜಿ
    • ಮಂಗಳೂರು : ಆರೋಪಿಗಳು – ಆರೋಪಿಗಳಿಗೆ ಆಶ್ರಯ ಕೊಡಲು ಬಯಸುವವರಿಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ..!
    • ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ
    • ಮಂಗಳೂರು : ಮೊಂಟೆ ಪದವು ಗುಡ್ಡ ಕುಸಿದು ಅಜ್ಜಿ ಮತ್ತು 2 ಮೊಮ್ಮಕ್ಕಳು ಸಾವು, ತಾಯಿಯ ರಕ್ಷಣೆ..!
    • ಮೇ. 31 : ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳ್ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ
    • ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಸುದೀರ್ ರೆಡ್ಡಿ ನೇಮಕ
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಕ್ರೀಡೆ
    Facebook YouTube
    ತುಳುನಾಡ ಸೂರ್ಯತುಳುನಾಡ ಸೂರ್ಯ
    Monday, June 2
    • ಮುಖ ಪುಟ
    • ಸ್ಥಳೀಯ
    • ರಾಜ್ಯ
    • ದೇಶ-ವಿದೇಶ
    • ಮನೋರಂಜನೆ
    • ಅಪರಾಧ
    • ತಂತ್ರಜ್ಞಾನ
    • ಕ್ರೀಡೆ
    • ಇತರೆ
    • ಬ್ರೇಕಿಂಗ್ ನ್ಯೂಸ್ 🔥
    ತುಳುನಾಡ ಸೂರ್ಯತುಳುನಾಡ ಸೂರ್ಯ
    Home » ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಇತರರು ಮಂಗಳೂರು ಲೋಕಾಯುಕ್ತ ಪೊಲೀಸ್ ಬಲೆಗೆ

    ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಇತರರು ಮಂಗಳೂರು ಲೋಕಾಯುಕ್ತ ಪೊಲೀಸ್ ಬಲೆಗೆ

    Tulunada SuryaBy Tulunada Surya28 May 2025Updated:28 May 2025 ಅಪರಾಧ No Comments1 Min Read
    Share
    Facebook WhatsApp
    Share on:

    ಪಿರ್ಯಾದಿದಾರರು ತನ್ನ ಪರಿಚಯದವರ ಹೆಸರಿನಲ್ಲಿ ಇರುವ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಿನಾಂಕ 28/10/2024 ರಂದು ಅರ್ಜಿಯನ್ನು ಸಲ್ಲಿಸಿರುತ್ತಾರೆ. ತಹಶೀಲ್ದಾರ್ ಉಳ್ಳಾಲ ತಾಲೂಕುರವರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ/ದೃಢಿಕರಣ ಪತ್ರ ನೀಡಬಹುದಾಗಿದೆ ಎಂಬುದಾಗಿ ದಿನಾಂಕ 21/03/2025ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರುವುದಿಲ್ಲ.

    ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ಪಿರ್ಯಾದಿದಾರರು ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50,000/- ತಗೊಳ್ಳಿ, ನಂತರ ಸೈನ್ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

    ಈ ದಿನ ದಿನಾಂಕ 28.05.2025 ರಂದು ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿರವರು ಚಾಲಕ ಮಧುರವರ ಮೂಲಕ ರೂ 50,000/- (ಐವತ್ತು ಸಾವಿರ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

    ಈ ಕಾರ್ಯಾಚರಣೆಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ ರವರು ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣಿಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ, ಶ್ರೀ ರಾಜೇಂದ್ರ ನಾಯ್ಕ ರವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

    Share on:
    Krishnaveni Lokayukta police Tulunada surya ತುಳುನಾಡ ಸೂರ್ಯ

    Keep Reading

    ಉಡುಪಿ: ಹಿರಿಯ ಸಾಹಿತಿ, ನಾಟಕಕಾರ, ಚಲನಚಿತ್ರ ನಟ, ನಿರ್ಮಾಪಕ , ನಿರ್ದೇಶಕ ಸುಧಾಕರ್ ಬನ್ನಂಜೆ ಯವರಿಗೆ ಸನ್ಮಾನ

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ನೂತನ ಮಹಿಳಾ ಅಧ್ಯಕ್ಷರಾಗಿ ಸುನಂದ ಕೋಟ್ಯಾನ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಪೂಜಾರಿ ಹಾವಂಜೆ ಮತ್ತು ಜೊತೆ ಕಾರ್ಯದರ್ಶಿಯಾಗಿ ಪ್ರೀತಮ್ ಡಿಸೋಜಾ ಆಯ್ಕೆ.

    ಮೂಡುಬಿದಿರೆ: ಜೈನಮಠದಲ್ಲಿ ಶ್ರುತ ಪಂಚಮಿ ಆಚರಣೆಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನ ಶ್ರುತ ಪಂಚಮಿ: ಭಟ್ಟಾರಕ ಸ್ವಾಮೀಜಿ

    Editors Picks
    Latest Posts
    Facebook YouTube

    News

    • ಅಪರಾಧ
    • ಇತರೆ
    • ಕ್ರೀಡೆ
    • ತಂತ್ರಜ್ಞಾನ
    • ದೇಶ-ವಿದೇಶ

    NEWS

    • ಬ್ರೇಕಿಂಗ್ ನ್ಯೂಸ್
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಮನೋರಂಜನೆ
    • ರಾಜ್ಯ

    TAGS

    • Featured
    • Top News

    Quick Links

    • Home
    • About
    • Contact Us
    • Privacy Policy
    • Terms & Conditions

    ©2024 Tulunada Surya. Developed by DMP

    Type above and press Enter to search. Press Esc to cancel.