ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢ ಶಾಲಾ ವಿಭಾಗ) ಮಣಿನಾಲ್ಕೂರು ಬಂಟ್ವಾಳ ತಾಲೂಕು
ಹಸಿರು ಮಣಿ ಇಕೋಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ -ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದೊಂದಿಗೆ
ವಿದ್ಯಾರ್ಥಿ ಗಳಿಗೆ ಕೃಷಿ ಯ ಮಹತ್ವದ ಬಗ್ಗೆ ತಿಳಿಸುವ ದೃಷ್ಟಿಯಿಂದ ಕಾರ್ಯಕ್ರಮ ಸಂಯೋಜಿಸಲಾಯಿತು.

ಮುಂದಿನ ದಿನಗಳಲ್ಲಿ ಯುವ ಜನಾಂಗ ಕೃಷಿ ಮೂಲಕ ಆಹಾರ ತಯಾರಿಸುವ ಅಗತ್ಯತೆ ಆಹಾರ ಕೊರತೆ ಸಮಾಜದಲ್ಲಿ ಕಾಡದಿರಬೇಕಾದರೆ ಕೃಷಿ ಉಳಿಸಿ ಬೆಳೆಸುವುದು ಬಹಳ ಪ್ರಾಮುಖ್ಯತೆ ಯಾಗಿದೆ.

ವಿದ್ಯಾರ್ಥಿಗಳು ಬಾರತ್ಯಾರು ಗೋಪಾಲ ಶೆಟ್ಟಿ ಯವರ ಗದ್ದೆಯಲ್ಲಿ ಭತ್ತನಾಟಿ ಕಾರ್ಯದಲ್ಲಿ ಪಾಲ್ಗೊಂಡು ಹರ್ಷ ಪಟ್ಟರು. ಉತ್ತಮ ವ್ಯವಸ್ಥೆ ಮಾಡಿಕೊಟ್ಟ ಗೋಪಾಲ್ ಶೆಟ್ಟಿ ಬಾರತ್ತ್ಯಾರು, ಎಸ್ ಡಿ ಎಂ. ಸಿ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬಾರತ್ತ್ಯಾರು ಮತ್ತು ರಾಜೇಶ್ ಶೆಟ್ಟಿ , ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ನಾರಾಯಣ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾದ ಅಶೋಕ್ ಶೆಟ್ಟಿ ಕೋಡಿಮಾರು ಹಾಗೂ ಸಹಕರಿಸಿದ ಶ್ರೀಮತಿ ಗುಣವತಿ, ನಮ್ಮ ಶಾಲಾ ಹಳೆವಿದ್ಯಾರ್ಥಿನಿಯರಾದ ಕು. ಚೈತನ್ಯಾ, ಕು. ವರ್ಷಾ ಇವರುಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು.
