ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 36ನೇ ಪದವು ಪೂರ್ವ ವಾರ್ಡಿನ ಕೋಟಿಮುರ – ಸರಿಪಳ್ಳ ಸಂಪರ್ಕಿಸುವ ಮುಖ್ಯ ರಸ್ತೆಯು 1.80 ಕೋಟಿ ರೂ. ವಿಶೇಷ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.
ನಂತರ ಮಾತನಾಡಿದ ಶಾಸಕರು, ಸುಮಾರು 900 ಮೀಟರ್ ಉದ್ದದ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2 ನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯ ಅಗತ್ಯತೆಯ ಕುರಿತು ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಅನೇಕ ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅಲ್ಲದೇ ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯ್ಲಿಯವರೂ ಸಹ ಈ ನಿಟ್ಟಿನಲ್ಲಿ ವಿಶೇಷ ಶ್ರಮವಹಿಸಿದ್ದರು. ಅವೆಲ್ಲದರ ಫಲವಾಗಿ ಇಂದು ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ 38 ವಾರ್ಡ್ ಗಳಲ್ಲಿಯೂ ವಿವಿಧ ಹಂತದ ಕಾಮಗಾರಿಗಳು ಮುಂದುವರಿಯಬೇಕಿದ್ದು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ್ ಕಂಡೆಟ್ಟು, ಅಜಯ್ ಕುಲಶೇಖರ, ಲಲ್ಲೇಶ್ ಕುಮಾರ್, ಪ್ರಶಾಂತ್, ರಾಜೇಶ್, ನಿತಿನ್ ಕುಮಾರ್, ಅಶ್ವಿತ್ ಕೊಟ್ಟಾರಿ, ಸುಜನ್ ದಾಸ್ ಕುಡುಪು, ಹರಿಣಿ ಪ್ರೇಮ್, ಸುಶಾಂತ್ ಕೋಟಿಮುರಾ, ನವೀನ್ ಶೆಣೈ, ರತೀಶ್, ಪ್ರಕಾಶ್ ಶೆಟ್ಟಿಗಾರ್, ಅಕ್ಷಿತ್, ವಿಶ್ವಜೀತ್, ರಾಜೇಂದ್ರ, ಪಾಂಡುರಂಗ, ವಿಶ್ವನಾಥ್, ಮಹೇಶ್ ಹೆಗ್ಡೆ, ಸುರೇಶ್, ಸಂದೀಪ್, ದೇವಪಣ್ಣ, ಪ್ರಕಾಶ್, ಸಂದೀಪ್ ರೆಡಿಬ್ರಿಕ್ಸ್, ಯತೀಶ್ ಆಚಾರ್ಯ, ಫ್ರಾನ್ಸಿಸ್ ಆರೋಜ, ಮುಕೇಶ್ ಮೊದಲಾದವರು ಉಪಸ್ಥಿತರಿದ್ದರು.

