ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಾಳಕೇರಿಯ ಯುವ ಬರಹಗಾರ ಬಂಡಾಯ ಕವಿಯೆಂದೆ ಜನಮನ್ನಣೆ ಪಡೆಯುತ್ತಿರುವ ಶ್ರೀ ರಾಘವೇಂದ್ರ ಎಚ್ ಹಳ್ಳಿ ಸಾಹಿತಿಗಳು ನಡೆದ ಬಂದ ಸಾಹಿತ್ಯದ ದಾರಿ ಅಷ್ಟೊಂದು ಸರಳವಾದದ್ದು ಅಲ್ಲಾ ಅನೇಕ ಅಪಮಾನ ಅವಮಾನ ಎದುರಿಸುತ್ತಾ ಹಲವಾರು ಕಷ್ಟ ನೋವು ಸಹಿಸಿಕೊಳುತ್ತಾ ತಮ್ಮ ಸಾಹಿತ್ಯ ದಾರಿ ಕಂಡುಕೊಂಡವರು ಇವರ ಸಂಕ್ಷಿಪ್ತ ಸಾಧನೆ ಬಗ್ಗೆ ಹೇಳುವುದಾದರೆ
ನವ ಮಹಿಳಾ ಜಾಗೃತಿ ವೇದಿಕೆ ಬೆಂಗಳೂರು ಇವರು ಕೊಡುಮಾಡುವ ಪ್ರತಿಷ್ಠಿತ ” 7-08-2022 ರಲ್ಲಿ ಕರ್ನಾಟಕ ರತ್ನ ಶ್ರೀ” ಲಭಿಸಿದೆ

“11-8-2024 ರಂದು ಗಂಗಾವತಿಯಲ್ಲಿ ನಡೆದ ಬಸವಜ್ಞಾನ ದೀಪೋತ್ಸವ ಹಾಗೂ ಕವಿನಾದ ಸಂಭ್ರಮೋತ್ಸೋವ ಕಾರ್ಯಕ್ರಮದಲ್ಲಿ ಅಕ್ಷರನಾದ ” ಬಸವ ಶ್ರೀ ರತ್ನ ಪ್ರಶಸ್ತಿ ” ದೊರಕಿದ್ದು ಇನ್ನು ದಿನನಿತ್ಯ ಕರ್ನಾಟಕದ್ಯಾದಂತ ಸಾಹಿತ್ಯ ಬಳಗ ನಡೆಸುವ ಕವನ ಸ್ಪರ್ಧೆಯಲ್ಲಿ ಬಾಗವಸಿದಕ್ಕಾಗಿ ಸಾವಿರಾರು ಅಭಿನಂದನಾ ಪತ್ರ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ

ಪ್ರಸ್ತುತ 25-5-2025 ರಂದು ಬಳ್ಳಾರಿ ಜಿಲ್ಲೆಯ ತಾಳೂರಲ್ಲಿ ನಡೆದ ನಕ್ಷತ್ರ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ” ಸಾಹಿತ್ಯ ನವಚೇತನ ರಾಷ್ಟ್ರ ಪ್ರಶಸ್ತಿ ” ನೀಡಿ ಗೌರವಿಸಲಾಗಿದೆ ಅಷ್ಟೇ ಅಲ್ಲದೇ ಇವರು ಈಗಾಗಲೇ “ಹಳ್ಳಿ ಕೈಗನ್ನಡಿ ” ಎನ್ನುವ ಕವನ ಸಂಕಲನ ಪುಸ್ತಕ ಹೊರತಂದಿದ್ದು ಇನ್ನು ಅನೇಕ ಪುಸ್ತಕ ಪ್ರಕಟಿಸಲು ಹಾತೋರಿಯುತ್ತಿದ್ದಾರೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಲಾಗಿದೆ
ಇಂತಹ ಸಾಹಿತ್ಯ ಸೇವೆ ಕೃಷಿಯನ್ನು ಮಾಡುವ ಆಗಾದ ಪ್ರತಿಭೆಯನ್ನು ಸರಕಾರ ಗುರುತಿಸಿ ಬೆಳಕಿಗೆ ತಂದರೆ ಇವರ ಸೇವೆಗೆ ಬೆಲೆ ಸಿಕಂತಾಗುತ್ತದೆ ಆಗೇ ಕನ್ನಡ ನಾಡಿನ ಸಾಹಿತ್ಯ ಸಿರಿಯೋ ಸಹ ದೊಡ್ಡ ಮಟ್ಟದಲ್ಲಿ ಬೆಳೆದು ನಿಲುತ್ತದೆ ಎನ್ನುವುದೇ ನಮೆಲ್ಲರ ಆಶಯ
