ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಕೊಳಂಬೆ ಇಲ್ಲಿಯ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ ವಿತರಣೆ ಮಾಡಲಾಯಿತು. ಸರಕಾರದ ವತಿಯಿಂದ ಸಮವಸ್ತ್ರ, ವಿನೋಧರ್ ವಕೀಲರು ಮತ್ತು ಸರಿತಾ ಚಾರಿಟೇಬಲ್ ಟ್ರಸ್ಟ್, ಶ್ರೀ ನಾರಾಯಣ ನಿವೃತ್ತ ಕೇಂದ್ರ ಸರಕಾರಿ ನೌಕರರು ಇವರ ವತಿಯಿಂದ ಬರೆಯುವ ಪುಸ್ತಕ. ಪ್ರವೀಣ್ ಚಂದ್ರ ರೈ ಕೊಲ್ಪೆ ಇವರ ಸಹಭಾಗಿತ್ವದಲ್ಲಿ ಅಧನಿ ಗ್ರೂಪ್ ಆಫ್ ಕಂಪನಿ ವತಿಯಿಂದ ಮಕ್ಕಳಿಗೆ ಶಾಲೆಗೆ ಬರುವ ರಿಕ್ಷಾದ ಖರ್ಚು ವೆಚ್ಚ, ಯಶವಂತ್ ಫ್ರೆಂಡ್ಸ್ ಸರ್ಕಲ್ ಕೊಳಂಬೆ ಇವರ ವತಿಯಿಂದ ಬ್ಯಾಗ್ ಹಾಗೂ ಯಶವಂತ್ ಫ್ರೆಂಡ್ಸ್ ಸರ್ಕಲ್ ಸದಸ್ಯ ಕಾರ್ತಿಕ್ ಇವರಿಂದ ಟೈ ಮತ್ತು ಐಡಿಗೆ ಬೇಕಾಗುವ ಖರ್ಚು ವೆಚ್ಚ ನೀಡಿದರು. . ವೇದಿಕೆಯಲ್ಲಿ ಪ್ರವೀಣಚಂದ್ರ ರೈ ಕೊಲ್ಪೆ. ಮುಖ್ಯ ಅಥಿತಿಗಳಾಗಿ ವಿನೋಧರ್ ವಕೀಲರು, ಶ್ರೀ ನಾರಾಯಣ ಕೇಂದ್ರ ಸಹಕಾರಿ ನೌಕರರು .ಅತಿಥಿಗಳಾಗಿ ಯಶವಂತ್ ಫ್ರೆಂಡ್ಸ್ ಸರ್ಕಲ್ ಸದಸ್ಯರು ಸುಶೀಲ, ತೇಜಸ್, ಮುರಳಿ, ಜಯಂತ್ ಹಾಗೂ ಮುಖ್ಯ್ಯೊಪಾಧ್ಯಾರಾದ ಮೊಲಿ ಮೇರಿನ ಲೈಸಾ, ಸಹಶಿಕ್ಸಕಿ ವನಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ್ ಭಾಗವಹಿಸಿದ್ದರು.
