ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಹೋರಾಟ ಮತ್ತು ತುಳು ಭಾಷೆ ಆಚಾರ ವಿಚಾರ ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆ ಗೆ ನೂರಾರು ನೂತನ ಕಾರ್ಯಕರ್ತರು ಸೇರ್ಪಡೆ ಗೊಳ್ಳುತ್ತಿದ್ದು. ಕಾರ್ಯಕರ್ತರಿಗೆ ಸಂಘಟನೆ ತತ್ವ ಸಿದ್ಧಾಂತ ಮತ್ತು ತುಳು ಭಾಷೆ ರಾಜ್ಯ ದ ಅಧಿಕೃತ ಭಾಷೆ ಘೋಷಣೆ, ಹೈಕೋರ್ಟ್ ಪೀಠ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ತುಳುನಾಡ ಅಭಿವೃದ್ಧಿ ಬಗ್ಗೆ ಸರ್ಕಾರ ಗಮನ ಹರಿಸುವ ಒತ್ತಾಯಿಸುವ ದೃಷ್ಟಿಯಿಂದ
20-07-2025 ರಂದು ರವಿವಾರ ಬೆಳಗ್ಗೆ 10.30 ಕಾಪು ತಾಲೂಕು ಘಟಕದ ವತಿಯಿಂದ ಕಾರ್ಯಕರ್ತರ ಸಮ್ಮೇಳನ ಹಿರಿಯಡ್ಕ ದ ಕೋಟ್ನಕಟ್ಟೆ ಸುರಭಿ ಹಾಲ್ ನಲ್ಲಿ ನಡೆಯಲಿದೆ. ಸಮ್ಮೇಳನವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಸುರೇಶ್ ಶೆಟ್ಟಿ ಗುರ್ಮೆ , ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಲು ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಲಿರುವರು.


ಅಧ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ, ರಾಜ್ಯ ,ಜಿಲ್ಲಾ ಮತ್ತು ತಾಲೂಕು ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಭಾಗವಹಿಸಲಿರುವರು. ಎಂದು ಪತ್ರಿಕೆ ಪ್ರಕಟಣೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ತಿಳಿಸಿದ್ದಾರೆ.
