ದಿನಾಂಕ ಜೂನ್ 18-2025ರಂದು ಪ್ರವೀಣ ಎಂಬ 29 ವರ್ಷ ಪ್ರಾಯದ ಯುವಕನಿಗೆ ಬೆಳಿಗ್ಗೆ ಏಳು ಗಂಟೆಯಿಂದ ಫ್ಯಾಕ್ಟರಿಗೆ ಹೋದಾಗ ಅಲ್ಲಿನ
ಹೆಚ್ ಎ ಆರ್ ಚಂದ್ರಶೇಖರ್ ಎಂಬವರು ಪ್ರವೀಣನನ್ನು ಗೇಟಿನ ಒಳಗೆ ಬಾರದಂತೆ ತಡೆದು ಏರುದನಿಯಿಂದ ಬೆದರಿಸಿ ಬೈಕ್ ಅನ್ನು ತಡೆದು ನಿಲ್ಲಿಸಿ ಫ್ಯಾಕ್ಟರಿ ಮಾಲೀಕ ಸಂಪತ್ ಶೆಟ್ಟಿ ಬರುವವರೆಗೆ ನಿನ್ನನ್ನು ಒಳಗೆ ಬಿಡಬಾರದು ಎಂದು ಹೇಳಿದ್ದಾರೆ ಎಂದು ಗದರಿಸಿ ಅವನ ಬೈಕ್ ಮತ್ತು ಬೈಕ್ ಕೀಯನ್ನು ಕಸಿದುಕೊಂಡು ನಂತರ ಬೆಳಿಗ್ಗೆ 9.30 ಗಂಟೆಗೆ ಮಾಲೀಕರಾದ ಸಂಪತ್ ಶೆಟ್ಟಿ ರವರು ಬಂದು ಆತನನ್ನು ಉದ್ದೇಶಿಸಿ ಬೋಳಿ ಮಗನೆ ನಿನಗೆ ಬೂಟ್ ಕಾಲಲ್ಲಿ ಒದೆಯುತ್ತೇನೆ ಎಂದು ಬೆದರಿಸಿ 9 30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಒಂಟಿಕಾಲಲ್ಲಿ ನಿಲ್ಲು ಇಲ್ಲ ಅಂದ್ರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ನಿಲ್ಲಿಸಿ ಅಮಾನವೀಯ ಕೃತ್ಯವನ್ನು ಈ ಕೃಷ್ಣಪ್ರಸಾದ್ ಕ್ಯಾಶ್ ಇಂಡಸ್ಟ್ರಿಯ ಮಾಲಿಕ ಸಂಪತ್ ಶೆಟ್ಟಿ, ಮತ್ತು ಚಂದ್ರಶೇಖರ್ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ( ಬಿಎನ್ಎಸ್)
2023 ಯುಎಸ್ 126. (2)352,351,(2)3,(5) ರಂತೆ ಪ್ರಕರಣದಾಲಾಗಿದೆ ಈ ಕೃಷ್ಣಪ್ರಸಾದ್ ಕ್ಯಾಶೂಇಂಡಸ್ಟ್ರೀಸ್ ಮಾಲಿಕ ಸಂಪತ್ ಶೆಟ್ಟಿ ಯನ್ನು ಮತ್ತು ಚಂದ್ರಶೇಖರ್ ರನ್ನು ಈ ಕೂಡಲೇ ಬಂಧಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರರವರು ಒತ್ತಾಯ ಹಾಗೂ ಈ ಅಮಾನವೀಯ ಕೃತ್ಯ ಎಸಗಿದ ಈ ಕಾರ್ಖಾನೆಯನ್ನು ಸರಕಾರ ಕೂಡಲೇ ಮುಟ್ಟುಗೋಲು. ಹಾಕಿಕೊಳ್ಳಬೇಕು ಮತ್ತು ಇದುವರೆಗೆ ಈ ಒಂದು ಫ್ಯಾಕ್ಟರಿಯಲ್ಲಿ ದೌರ್ಜನ್ಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ಸಂಪೂರ್ಣ ಪರಿಹಾರವನ್ನು ಫ್ಯಾಕ್ಟರಿ ಮಾಲಕನಿಂದ ವಸೂಲಿ ಮಾಡುವಂತೆ ಹಾಗೂ ಕಾರ್ಮಿಕ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಮುಂದೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದೆಂದು ಜಯ ಪೂಜಾರಿ ಲಕ್ಷ್ಮಿನಗರ ಆಗ್ರಹಿಸಿದ್ದಾರೆ.
Trending
- ತುಳು ಕೂಟ (ರಿ.), ಕುಡ್ಲ ಸತ್ಯದಪ್ಪೆ ದೇಯಿ ಬೈದೆದಿ’ಎಂಬ ಕಿರು ರೂಪಕ ಪ್ರದರ್ಶನ
- ದಕ್ಷಿಣ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ
- ಮಲ್ಪೆಯಲ್ಲಿ ಚೂರಿ ಇರಿತ: ಹಿಂದೂ ಸಂಘಟನೆ ಮುಖಂಡ ಮಂಜು ಕೊಳ ಮೇಲೆ ಚೂರಿ ಇರಿತ
- ಮಂಗಳೂರು: ಡಿಸೆಂಬರ್ನಲ್ಲಿ “ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ” ಲೋಕಾರ್ಪಣೆ -ಐಕಳ ಹರೀಶ್ ಶೆಟ್ಟಿ
- ಮಂಗಳೂರು ಲೋಕೋಪಯೋಗಿ ಇಲಾಖೆಯ ಎಸ್ಡಿಎ ಲಂಚ ಸ್ವೀಕರಿಸುವಾಗ ಕರ್ನಾಟಕ ಲೋಕಾಯುಕ್ತ ಬಲೆಗೆ
- ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳರ್ಪಾಡಿ ಗ್ರಾಮದ ಕ್ರೀಡಾಂಗಣಕ್ಕಾಗಿ ಸರಕಾರಿ ಜಾಗ ಮೀಸಲಿರಿಸುವಂತೆ ಕಾಪು ತುಳುನಾಡ ರಕ್ಷಣಾ ವೇದಿಕೆ ಮನವಿ
- ಹರಿಹರಪುರದಲ್ಲಿ’ಜಾಬಾಲಿ – ನಂದಿನಿ’ ಯಕ್ಷಗಾನ ತಾಳ ಮದ್ದಳೆ
- ಕುಂದಾಪುರ: ಹೊಸಂಗಡಿ ಟ್ರೆಕ್ಕಿಂಗ್ ವೇಳೆ ಕುಂದಾಪುರದ ಮೆಡಿಕಲ್ ಶಾಪ್ನ ಮಾಲಕಿ ನದಿಯಲ್ಲಿ ಮುಳುಗಿ ದುರ್ಮರಣ

