ಡಿಸೆಂಬರ್ 30, ಕಾಡು ಪ್ರಾಣಿಗಳ ಕಾಟ ತಡೆಗಟ್ಟುದ್ದಕ್ಕಾಗಿ ತುಳುನಾಡ ರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ ಜನಜಾಗೃತಿ ಸಭೆ ನಡೆಯಲಿದೆ . ಚೆನೈತ್ತೋಡಿ,ಎಲಿಯನಡು ಗೋಡು, ಅಜ್ಜಿ ಬೆಟ್ಟು ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹಲವು ಚಿರತೆಗಳು ರಾತ್ರಿ ಹೊತ್ತಿನಲ್ಲಿ ಜನಸಂದನಿ ಇರುವ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಘಟನೆಗಳು ನಡೆದಿವೆ ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ಯವರು ತಕ್ಷಣವೇ ಕ್ರಮ ಕೈಗೊಂಡು ಈ ಚಿರತೆಗಳನ್ನು ಹಿಡಿದುಕೊಂಡು ಹೋಗುವಂತೆ ಮನವಿ ಮಾಡಲು ತುಳುನಾಡ ರಕ್ಷಣಾ ವೇದಿಕೆ ವೇದಿಕೆಯ ಸಹಭಾಗಿತ್ವದಲ್ಲಿ. ನಿತ್ಯಾನಂದ ಮುಖ್ಯಪ್ರಾಣ ಭಜನಾ ಮಂದಿರದ ಎದುರುಗಡೆ ಗುರುನಗರ ಚೆನೈತ್ತೋಡಿ ಗ್ರಾಮ ದಲ್ಲಿ ದಿನಾಂಕ 30-12-2024 ರಂದು 9,30 ಕ್ಕೆ ಸಭೆ ಸೇರಲು ನಿರ್ಧಾರಿಸಲಾಗಿದೆ ಈ ಸಭೆಗೆ ಗ್ರಾಮಸ್ಥರ ಒಗ್ಗಟ್ಟಿನ ಅಗತ್ಯವಿದೆ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದ ಪದವು ಘಟಕ ಪ್ರಮುಖರು ಹಾಗೂ ಸುನಿಲ್ ಕುಮಾರ್ ಕೆಎಸ್ ಉಪ ವಲಯ ಅರಣ್ಯ ಅಧಿಕಾರಿ ವೇಣೂರು ಭಾಗವಹಿಸಲಿರುವರು ಸರ್ವರೂ ಭಾಗವಹಿಸುವಂತೆ ತುಳುನಾಡ ರಕ್ಷಣಾ ವೇದಿಕೆ ವಿನಂತಿಸಿದೆ.
Trending
- ಕಾವೇರಿ–ಕೊಡಗು ಪರಿಸರ ಸಂರಕ್ಷಣೆಗೆ ಒಗ್ಗಟ್ಟಿನ ಧ್ವನಿ: ತುಳುನಾಡ ರಕ್ಷಣಾ ವೇದಿಕೆಯಿಂದ ಸಂಪೂರ್ಣ ಬೆಂಬಲ- ಯೋಗಿಶ್ ಶೆಟ್ಟಿ ಜಪ್ಪು
- ಎಂಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖೆ – ವಾರ್ಷಿಕೋತ್ಸವ, ₹10 ಕೋಟಿಗಳ ವಹಿವಾಟು ಸಾಧನೆ ಹಾಗೂ 14ನೇ ಎಟಿಎಂ ಉದ್ಘಾಟನೆ
- ಸಹಕಾರ ಸಪ್ತಾಹ–2025 : ಉಡುಪಿ ಉಪ್ಪುರು ರಮೇಶ್ ಶೆಟ್ಟಿ ಅವರಿಗೆ ತೌಳವ ಮಾಣಿಕ್ಯ ಪ್ರಶಸ್ತಿ
- ಸಹಕಾರ ಸಪ್ತಾಹ–2025: ಕೋಟೆಕಾರು ವ್ಯವಸಾಯ ಸಹಕಾರಿ ಸಂಘ ಅದ್ಯಕ್ಷ ಕೃಷ್ಣ ಶೆಟ್ಟಿಗೆ ತೌಳವ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ
- ಉಡುಪಿ: ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರೆನಾಲ್ಡ್ ಪ್ರವೀಣ್ ಕುಮಾರ್’ಗೆ ಸತತ ಎರಡನೇ ಬಾರಿ ಗೆಲುವು
- ಸಹಕಾರ ಸಪ್ತಾಹ–2025 : ತೌಳವ ಸಹಕಾರಿ ಮಾಣಿಕ್ಯ ಮತ್ತು ತೌಳವ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ
- ಕೋಟ: ಶಿರಿಯಾರ ಸೇವಾ ಸಹಕಾರಿ ಸಂಘ ವಂಚನೆ ಪ್ರಕರಣ – ಪ್ರಮುಖ ಆರೋಪಿ ಬಂಧನ
- ಬ್ರಹ್ಮಾವರ: ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಾಂತರ ರೂ. ವಂಚನೆ: ಶಾಖಾ ವ್ಯವಸ್ಥಾಪಕ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

