ಮಂಗಳೂರು: ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣದ ಉದ್ಘಾಟನಾ ಕಾರ್ಯಕ್ರಮ ತಾಲೂಕು ಅಧ್ಯಕ್ಷರಾದ ದಿನಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ. 30ರಂದು ಸರ್ಕಿಟ್ ಹೌಸ್ ಬಳಿಯಿರುವ ಲಯನ್ಸ್ ಆಶೋಕ ಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಕರ್ನಾಟಕ ರಾಜ್ಯದ ಚೇರ್‌ಮೆನ್ ಆದ ರಾಕೇಶ್ ಮಲ್ಲಿ ಉದ್ಘಾಟಿಸಿದರು. ಅಮೆಚೂರ್ ಕಬಡ್ಡಿ ಈ ರಾಜ್ಯದ ಕಾನೂನುಬದ್ಧ ರೀತಿಯಲ್ಲಿ ಇರುವ ಶ್ರೇಷ್ಠ ಸಂಘಟನೆಯಾಗಿದೆ. ಇದರ ಮೂಲಕ ಅನೇಕ ಕಬಡ್ಡಿ ಆಟಗಾರರ ಉತ್ತಮ ಜೀವನವನ್ನು ರೂಪಿಸಲು ಕೆಲಸ ಮಾಡಿದೆ ಮತ್ತು ಬೆಳ್ತಂಗಡಿ ಶಾಸಕರು ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿರುತ್ತದೆ. ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಅವ್ಯವಹಾರ ಆಗಿದೆ ಎನ್ನುವ ಆರೋಪ ಮಾಡಿದ್ದಾರೆ. ನಾನು ಕದ್ರಿ ದೇವಸ್ಥಾನದಲ್ಲಿ ಆಣೆ ಮಾಡಲು ರೆಡಿ ಇದ್ದೇನೆ. ನೀವೂ ಕೂಡ ಬನ್ನಿ ಎಂದು ಅಹ್ವಾನ ನೀಡಿದರು
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮಾತನಾಡಿ, ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೇತೃತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಗಳಿಗೆ ತನ್ನ ವತಿಯಿಂದ ಕಬಡ್ಡಿ ಮ್ಯಾಟ್ ಕೊಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕಬಡ್ಡಿ ಕ್ಷೇತ್ರದಲ್ಲಿ ಸಾಧನೆಗೈನ ಮತ್ತು ಹಿರಿಯ ಆಟಗಾರರಾಗಿ ಕಬಡ್ಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತಿರುವ ಅಮೆಚೂರ್‌ನ ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ ಮತ್ತು ಮಾಜಿ ಅಂತರ್ ರಾಷ್ಟ್ರೀಯ ತೀರ್ಪುಗಾರರಾದ ಬಿ.ಬಿ.ಅಮರ್‌ನಾಥ್ ರೈಯವರಿಗೆ ತಾಲೂಕು ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಂತೂರ್ ನಿಟ್ಟೆ ಕಾಲೇಜಿನ ಪ್ರಾಂಶುಪಾಲ ನವೀನ್ ಶೆಟ್ಟಿ ಮಾತನಾಡಿ, ಒಂದು ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತಾಗ ದ್ವೇಷ ಆಸೂಯೆಗಳು ಸ್ವಾಭಾವಿಕ. ಆದರೆ ಅಮೆಚೂರ್ ಪಾರದರ್ಶಕವಾಗಿ ಕಬಡ್ಡಿ ಆಟಗಾರರ ಏಳಿಗೆಗೆ ಕೆಲಸ ಮಾಡುತ್ತಿದೆ. ಮುಂದೆ ಕೂಡಾ ಇನ್ನೂ ಹೆಚ್ಚಿನ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಅತಿಥಿ ಸ್ಥಾನದಲ್ಲಿ ಅಮೆಚೂರ್ ಇದರ ಗೌರವ ಸಲಹೆಗಾರರಾದ ರತನ್ ಶೆಟ್ಟಿ, ಮೋನಪ್ಪ ಕುಳಾಯಿ ತೀರ್ಪುಗಾರರ ಸಂಸ್ಥೆಯ ಚೇರ್‌ಮೆನ್ ಆದ ಶಿವರಾಮ್ ಬಸಕಲ್, ಉದ್ಯಮಿ ದೇವಿಚರಣ್ ಶೆಟ್ಟಿ, ಲಯನ್ಸ್ ಕ್ಲಬ್ ಅಶೋಕನಗರ ಅಧ್ಯಕ್ಷ ಸುರೇಶ್ ಶೆಟ್ಟಿ, ಅಮೆಚೂರ್ ಬ್ಯಾಡ್ ಮಿಂಟನ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್, ತಾಲೂಕು ರೆಫ್ರಿ ಬೋರ್ಡ್ ಅಧ್ಯಕ್ಷ ಸಂದೀಪ್ ಎಸ್. ರಾವ್, ಬಂಟ್ವಾಳ ತಾಲೂಕು ಅಧ್ಯಕ್ಷ ಪುಷ್ಪರಾಜ್ ಚೌಟಿ, ಕಡಬ ತಾಲೂಕು ಅಧ್ಯಕ್ಷ ಯಾಕೂಬ್, ಪುತ್ತೂರು ತಾಲೂಕು ಅಧ್ಯಕ್ಷ ಸುರೇಂದ್ರ ರೈ ಹಾಗೂತಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಪದಾಧಿಕಾರಿಗಳಾದ ರಾಜು ಪ್ರಸನ್ನ, ಸಚಿನ್ ಬಂಗೇರ, ಜಗತ್ ಎಕ್ಕೂರು, ಅವಿನಾಶ್ ಶೆಟ್ಟಿ, ರವಿ ಉರ್ವ, ಸುಕುಮಾರ್ ಕಡಂಬೈಲ್, ದೇವದಾಸ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಸಿಫಾಲ್ ರಾಜ್, ಸಾಕ್ಷತ್ ಶೆಟ್ಟಿ, ಮುನೀಶ್ವರನ್ ಮೋಹನ್ ಬಡ್ಡೆ, ತುಷಾರ್ ಕದ್ರಿ, ಅಶ್ವಿನ್ ಬಲ್ಲಾಳ್, ಸುದೇಶ್ ಕುಮಾರ್ ಇರಾ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ದಕ್ಷಿಣ ಕನ್ನಡ ಜಿಲ್ಲಾ ಪುರುಷ ಮತ್ತು ಮಹಿಳಾ ತಂಡದ ಸದಸ್ಯರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು. ತಾಲೂಕು ಅಧ್ಯಕ್ಷ ದಿನಕರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು. ಕಾರ್ಯಕ್ರಮವನ್ನು ದೀಪಕ್ ಅಡ್ಯಾರ್ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸುಮಾರು 300 ಕಬಡ್ಡಿ ಅಭಿಮಾನಿಗಳು ಸಾಕ್ಷಿಗಳಾದರು.