ಸಮ್ಮೇಳನ ಉದ್ಘಾಟನೆ |
ಹಿರಿಯಡ್ಕದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ವತಿಯಿಂದ ಆಯೋಜಿಸಲಾದ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವು ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯೋಗೀಶ್ ಶೆಟ್ಟಿ ಜೆಪ್ಪು, ತುಳುನಾಡ ರಕ್ಷಣಾ ವೇದಿಕೆ ಬೆಳೆದು ಬಂದ ಹಾದಿ, ಸಂಘಟನೆಯ ಕಾರ್ಯವೈಖರಿ ಹಾಗೂ ತುಳುನಾಡಿನ ನೆಲ–ಜಲ–ಸಂಸ್ಕೃತಿ ರಕ್ಷಣೆಗೆ ನಡೆಸುತ್ತಿರುವ ಹೋರಾಟಗಳ ಕುರಿತು ವಿವರಿಸಿದರು. ಸಮಾಜಕ್ಕೆ ತುಳುನಾಡ ರಕ್ಷಣಾ ವೇದಿಕೆ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿ, ಕಾರ್ಯಕರ್ತರು ಸಂಘಟನೆಯ ಬಲವಾಗಬೇಕು ಎಂದು ಕರೆ ನೀಡಿದರು.

ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೈಗೊಂಡ ಜನಪರ ಕಾರ್ಯಕ್ರಮಗಳು, ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆದ ಹಲವು ಹೋರಾಟಗಳು ಹಾಗೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳನ್ನು ಮಾಡುತ್ತಿದ್ದು ಹಾಗೂ “ನಮ್ಮ ನಡೆ ಪಂಚಾಯಿತಿ ಕಡೆ” ಅಭಿಯಾನ ಯಶಸ್ವಿಯಾಗಿ ಜನರ ಸಮಸ್ಯೆಗಳ ಪರಿಹಾರಕ್ಕೆ ವೇಗ ತಂದಿದ್ದು, ಸಂಘಟನೆಯ ಕುರಿತು ಜನರಲ್ಲಿ ಅಭಿಮಾನ ಹೆಚ್ಚುವಂತೆ ಮಾಡಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾತನಾಡಿ, ಸಂಘಟನೆಯ ಕಾರ್ಯವೈಖರಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.

ಹೊಸ ಸದಸ್ಯರ ಸೇರ್ಪಡೆ |
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವೈಖರಿಯಿಂದ ಪ್ರೇರಿತರಾಗಿ ಗಾಯತ್ರಿ ಆಚಾರ್ಯ, ಸೋಮಶೇಖರ್, ಅಜಯ್ ಶೆಟ್ಟಿ, ಸರ್ವೋತ್ತಮ್ ಅಮೀನ್ ಹಾಗೂ ಆಕಾಶ್ ಕುಲಾಲ್ ಅವರು ಕಾಪು ತಾಲೂಕು ಘಟಕಕ್ಕೆ ಸೇರ್ಪಡೆಗೊಂಡರು.

ಪ್ರಮುಖ ನಾಯಕರಿಗೆ ಸನ್ಮಾನ
ಕಾಪು ತಾಲೂಕು ಘಟಕದ ವತಿಯಿಂದ ಯೋಗೀಶ್ ಶೆಟ್ಟಿ ಜೆಪ್ಪು, ಫ್ರ್ಯಾಂಕಿ ಡಿಸೋಜ ಹಾಗೂ ಅನುಸೂಯಾ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಜಯ ಪೂಜಾರಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಮಮತಾ ಅಮೀನ್, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯಾ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಮಹಿಳಾ ಮುಖಂಡರುಗಳಾದ ಜಯಲಕ್ಷ್ಮಿ ಹೆಗಡೆ, ರೋಹಿಣಿ ಶೆಟ್ಟಿ ,ಗುಲಾಬಿ ಶೆಟ್ಟಿ ,ವಿನೋದ ಜ್ಯೋತಿ ಆರ್ , ಲಕ್ಷ್ಮಿ ಬನ್ನಂಜೆ , ಮಮತಾ ,ಸುಲೋಚನಾ ಪೂಜಾರಿ ಮದ್ಯಮ ಮಿತ್ರರಾದ ಸಂತೋಷ , ಶಂಕರ್ ಉಡುಪಿ , ಸಂಜೀವ ಕಟಪಾಡಿ , ಮಹೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು
ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ನಾಯಕರು, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ನಿತಿನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೃಷ್ಣಾನಂದ ನಾಯಕ್ ವಂದನಾರ್ಪಣೆ ಸಲ್ಲಿಸಿದರು. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.






