ಹಿಂದೂ ಯುವ ಸೇನೆ ಭಾರ್ಗವ ಶಾಖೆ ಅಳಪೆ ನೇತೃತ್ವದಲ್ಲಿ 2025 ನೇ ಸಾಲಿನ “ಕೆಸರ್ಡ್ ಡೊಂಜಿ ದಿನ “ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡೋತ್ಸವವನ್ನು ನಡೆಸಲಾಯಿತು. ಸುಮಾರು 1500 ಮಕ್ಕಳು ಮತ್ತು ಕ್ರೀಡಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 55 ವರ್ಷದಿಂದ ಕೃಷಿ ಚಟುವಟಿಕೆಯನ್ನು ಉಳಿಸಿಕೊಂಡು ಬಂದ ಸದಾಶಿವ ಭಂಡಾರಿ ಮತ್ತು ಜಯಲಕ್ಷ್ಮಿ ಭಂಡಾರಿ ಅವರಿಗೆ ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ದಿನಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಯನ್ನು ಹೇಳಿದರು,

ಸಮರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಹಿಂದು ಯುವ ಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಶ್ರೀ ಯಶೋಧರ ಚೌಟ ವಹಿಸಿದ್ದರು,

ಶಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಅವರು ಮಾತನಾಡಿ ತುಳುನಾಡ ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು, ತುಳುನಾಡ ಇತಿಹಾಸವನ್ನು ಜನರ ಮುಂದೆ ಸವಿಸ್ತಾರವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಜನಾರ್ದನ್ ಅರ್ಕುಳ , ಕುಡ್ಲ ಚಿಪ್ಸ್ ಫಂಡ್ ಮಾಲಕರಾದ ಕಿರಣ್ ರೈ, ಉದ್ಯಮಿ ತಿಲಕರಾಜ್, ದಕ್ಷಿಣ ಮಂಡಲ ಕಾರ್ಯದರ್ಶಿ ಸುಮತಿ ಚಂದ್ರಶೇಖರ್, ಶಾಖೆ ಅಧ್ಯಕ್ಷರಾದ ವಿನಯ್ ಕುಮಾರ್ , ಸುರೇಶ್ ಭಟ್, ಹೇಮಾ ಪ್ರಕಾಶ್ ಹೆಗ್ಡೆ, ರಾಮ್ ಪ್ರಸಾದ್ ಏಕ್ಕೂರು, ಸುಧೀರ್ ಕುಮಾರ್ , ಗುರುಸ್ವಾಮಿ ದೀಕ್ಷಿತ್ ನಾಯಕ್ ,ಶ್ರೀಮತಿ ರೇಖಾ, ಶ್ರೀಮತಿ ಪೂಜಾ, ಶ್ರೀಮತಿ ಶಿಲ್ಪ ಉಪಸ್ಥಿತರಿದ್ದರು. ನಂತರ ವಿಜೇತರಾದ ಎಲ್ಲರಿಗೂ ಬಹುಮಾನ ವಿತರಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಪ್ರಮೋದ್ ಕುಮಾರ್ ಅಳಪೆ ನಿರ್ವಹಣೆ ಮಾಡಿದರು. ಪದ್ಮನಾಭ ಗಟ್ಟಿ ಸ್ವಾಗತಿಸಿದರು, ಹರೀಶ್ ಕುಮಾರ್ ಧನ್ಯವಾದ ಅರ್ಪಿಸಿದರು.






