ಮಂಗಳೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ, ಪ್ರಜ್ವಲ್ ಶೆಟ್ಟಿ ನಿರ್ಮಾಣ ಮತ್ತು ಕೀರ್ತನ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು 2026ರ ಜನವರಿಯಲ್ಲಿ ಕರ್ನಾಟಕದಾದ್ಯಂತ ಹಾಗೂ ವಿದೇಶಗಳಲ್ಲಿಯೂ ತೆರೆಕಾಣಲಿದೆ.
ತುಳು ಚಲನಚಿತ್ರರಂಗದಲ್ಲಿ ಬೃಹತ್ ಬಜೆಟ್ನಲ್ಲಿ ನಿರ್ಮಿತವಾಗುತ್ತಿರುವ ಈ ಚಿತ್ರವು ಕ್ರಿಕೆಟ್ ಆಟ ಮತ್ತು ಆಟಗಾರರ ಬದುಕಿನ ಹಿನ್ನಲೆಯನ್ನು ಆಧಾರವಾಗಿ ಹೊಂದಿದೆ. ಹಾಸ್ಯ, ಪ್ರೇಮಭಾವನೆ ಹಾಗೂ ಪ್ರಭಾವಶಾಲಿ ಸಮಾಜಮುಖಿ ಸಂದೇಶವನ್ನು ಒಳಗೊಂಡಿರುವ ಈ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಪ್ರಥಮ ನಿರ್ದೇಶನ – ಕೀರ್ತನ್ ಭಂಡಾರಿ
ಚಿತ್ರದ ಕಥೆ ಹಾಗೂ ಚಿತ್ರಕಥೆಯನ್ನು ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಕೀರ್ತನ್ ಭಂಡಾರಿಗೆ ಇದು ಪ್ರಥಮ ನಿರ್ದೇಶನ. ಮಂಗಳೂರು ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ನೈಸರ್ಗಿಕ ಸೌಂದರ್ಯವನ್ನು ಚಿತ್ರದಲ್ಲಿ ಮೂಡಿಸಲಾಗಿದೆ.
ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ, ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.
ಪ್ರಮುಖ ತಾರಾಗಣ
ಚಿತ್ರದಲ್ಲಿ ವಿನಿತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸಮತಾ ಅಮೀನ್, ಅನ್ವಿತಾ ಸಾಗರ್, ಉಮೇಶ್ ಮಿಜಾರು, ರೂಪಾ ವರ್ಕಾಡಿ, ಸರ್ವೋತ್ತಮ ಶೆಟ್ಟಿ, ವಾಲ್ಟರ್ ನಂದಳಿಕೆ, ಲಂಚೂ ಲಾಲ್ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ.
ತಾಂತ್ರಿಕ ತಂಡ
ಛಾಯಾಗ್ರಹಣ: ವಿನುತ್ ಕೆ. ಸುವರ್ಣ
ಸಂಕಲನ: ಸುಜಯ್ ಶಿವರಾಮ್ ಮತ್ತು ಕೌಶಿಕ್ ಭಂಡಾರಿ
ಸಂಗೀತ: ಸೃಜನ್ ಕುಮಾರ್ ತೋನ್ಸೆ
ಗೀತಾ ಸಾಹಿತ್ಯ: ಕೀರ್ತನ್ ಭಂಡಾರಿ
ಸಹ ನಿರ್ಮಾಪಕರು: ರೋಹನ್ ಪಿರೇರ ವಾಮಂಜೂರು ಮತ್ತು ಸಂತೋಷ್ ಲಾಡ್
ಟೀಸರ್ಗೆ ಉತ್ತಮ ಪ್ರತಿಕ್ರಿಯೆ
ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಮಹಾಪೂರವನ್ನೇ ಎಳೆದಿದ್ದು, ತುಳುನಾಡಿನ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.
ಅದ್ಧೂರಿ ಆಡಿಯೋ ಲಾಂಚ್ – ದುಬೈನಲ್ಲಿ ಜರುಗಿದ ವೈಭವ
2025ರ ಆಗಸ್ಟ್ 24ರಂದು, ದುಬೈಯ ಟೈಮ್ ಓಕ್ ಹೋಟೆಲ್ನ ಫಿಶರ್ಮ್ಯಾನ್ಸ್ ಹಬ್ನಲ್ಲಿ ‘ಗಜಾನನ ಕ್ರಿಕೆಟರ್ಸ್’ ಚಿತ್ರದ ಆಡಿಯೋ ಲಾಂಚ್ ವಿಜೃಂಭಣೆಯಿಂದ ನಡೆಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಹಾಡು ಬಿಡುಗಡೆ ಮಾಡಿದ್ದು, ತಮ್ಮ ಸೊಗಸಾದ ಧ್ವನಿಯಲ್ಲಿ ಚಿತ್ರದಲ್ಲೊಂದು ಹೃದಯಸ್ಪರ್ಶಿ ಗೀತೆಯನ್ನು ಹಾಡಿದ್ದಾರೆ.
ಗಣ್ಯರ ಸಮ್ಮಿಲನ: ಬಿ.ಆರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ (ಅಬುದಾಬಿ), ಹರೀಶ್ ಶೇರಿಗಾರ್, ಪ್ರತಾಪ್ ಮೆಂಡೋನ್ಸಾ, ಸುಧರ್ಶನ್ ಹೆಗ್ಡೆ, ಹಿದಾಯತ್ ಅಡೂರು ಸೇರಿದಂತೆ 150ಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿಶ್ವದಾದ್ಯಂತ ಪ್ರೀಮಿಯರ್ ಶೋಗಳು
2025ರ ನವೆಂಬರ್ 22ರಿಂದ ಯುಎಇ, ಸೌದಿ ಅರೇಬಿಯಾ, ಕತಾರ್, ಓಮಾನ್, ಬಹ್ರೇನ್, ಕುವೈತ್ ಮುಂತಾದ ದೇಶಗಳಲ್ಲಿ ‘ಗಜಾನನ ಕ್ರಿಕೆಟರ್ಸ್’ ಚಿತ್ರದ ಪ್ರೀಮಿಯರ್ ಪ್ರದರ್ಶನಗಳು ನಡೆಯಲಿವೆ.
2026ರ ಜನವರಿಯಲ್ಲಿ ಅಧಿಕೃತ ಬಿಡುಗಡೆ: ಚಿತ್ರತಂಡ ಈ ಚಿತ್ರವನ್ನು ರಾಜ್ಯಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿ ಸಕ್ರೀಯವಾಗಿ ತಯಾರಿ ನಡೆಸುತ್ತಿದೆ ಎಂದು ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳು ಚಿತ್ರರಂಗದಲ್ಲಿ ಹೊಸ ಎತ್ತರದತ್ತ ಯಾನ ಪ್ರಾರಂಭಿಸಿರುವ ‘ಗಜಾನನ ಕ್ರಿಕೆಟರ್ಸ್’ – ಪ್ರೇಕ್ಷಕರು ಆನಂದದಿಂದ ನಿರೀಕ್ಷಿಸುತ್ತಿರುವ ಚಿತ್ರ.
