
ಕುಂದಾಪುರ: ಡಾ. ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಕುಂದಾಪುರ ಸಿಟಿ ಜೆ.ಸಿ.ಐ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಲಕ್ಷ್ಯ ಕ್ಲಿನಿಕ್ ನ ವೈದ್ಯೇ ಡಾ. ಅಮ್ಮಾಜಿ ಸನ್ಮಾನ ಸ್ವೀಕರಿಸಿದರು . ಹೆಮ್ಮಾಡಿಯ ಲಕ್ಷ್ಯ ಕ್ಲಿನಿಕ್ ನ ವೈದ್ಯೇ ಡಾ. ಅಮ್ಮಾಜಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿಯೇ ಹೆಣ್ಣು ವಿವಿಧ ನೆಲೆಯಲ್ಲಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು ಆತ್ಮಸ್ಥೈರ್ಯ ಮತ್ತು ನಿಷ್ಠೆಯಿಂದ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಹೆಣ್ಣು ಮಕ್ಕಳಿಗೆ ಸಮಾಜದ ಮುಖ್ಯ ಭೂಮಿಕೆಯಲ್ಲಿ ಗುರುತಿಸುವಂತಾಗಬೇಕಾದರೆ ಪೋಷಕರು ಮತ್ತು ಹೆತ್ತವರ ಬೆಂಬಲ ಅತ್ಯಂತ ಮುಖ್ಯ ನನ್ನ ಮನೆಯವರ ನೆರವಿನಿಂದ ನಾನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ ವಾಯಿತು ಎಂದರು.

