ನಾಗೋರಿ, ಮಂಗಳೂರು: ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ ಸಂಸ್ಥೆಯ ಹೊಸ ಕಚೇರಿ ಉದ್ಘಾಟನಾ ಹಾಗೂ ಆಶೀರ್ವಾದ ಸಮಾರಂಭವು ನವೆಂಬರ್ 29, 2025ರಂದು ನಾಗೋರಿ, ಕಂಕನಾಡಿ ‘ಬಿ’ ವಿಲ್ಲೇಜ್ ಪ್ರದೇಶದ ಏಂಜಲ್ ರೆಸಿಡೆನ್ಸಿಯಲ್ಲಿ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮವು ಬೆಳಿಗ್ಗೆ 10.30ಕ್ಕೆ ಗಾರ್ಡಿಯನ್ ಏಂಜಲ್ ಚರ್ಚ್ ಪಾರಿಷ್ ಪ್ರೀಸ್ಟ್ ರೆವ್. ಫಾ. ಫ್ರೆಡ್ರಿಕ್ ಮೋಂಟೆರೋ ಹಾಗೂ ಸೋಸಿಯಸ್ ವಿಕಾರ್ ರೆವ್. ಫಾ. ಸ್ಟ್ಯಾನಿ ಫರ್ನಾಂಡ್ಸ್ ಅವರ ಆಶೀರ್ವಾದದೊಂದಿಗೆ ಆರಂಭಗೊಂಡಿತು. ಧರ್ಮಗುರುಗಳು ಸಂಸ್ಥೆಯ ಪ್ರಗತಿ, ಸೇವಾ ನಿಷ್ಠೆಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳು ಮತ್ತು ಗೌರವ ಅತಿಥಿಗಳು
ಕಾರ್ಯಕ್ರಮದಲ್ಲಿ ಡಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಡಕ್ಷಿಣ ಕನ್ನಡ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿತ್ರಂಜನ್, ಏಂಜಲ್ ರೆಸಿಡೆನ್ಸಿ ಮಾಲೀಕ ಯೋಗೀಶ್ ಪೂಜಾರಿ ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.

ಹಾಜರಿದ್ದ ಗಣ್ಯರು
ಎಂಸಿಸಿ ಬ್ಯಾಂಕ್ ನ ಅದ್ಯಕ್ಷ ಅನಿಲ್ ಲೋಬೊ, ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ. 49ರ ಕಾರ್ಪೊರೇಟರ್ ಸಂದೀಪ್ ಗರೋಡಿ, ಆಲಾಪೆ ವಾರ್ಡ್ ನಂ. 50ರ ಕಾರ್ಪೊರೇಟರ್ ಶೋಭಾ ಪೂಜಾರಿ, ಸಿಪ್ಲಾ ಲಿಮಿಟೆಡ್ನ ಅಸೋಸಿಯೇಟ್ ಡೈರೆಕ್ಟರ್ ದೀಪಕ್ ಡರ್ಮನ್ ಡಿಸೊಜಾ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಸಂಸ್ಥೆಯ ಪರಿಚಯ – ಸ್ವಾಗತ
ಸಂಸ್ಥೆಯ ಪ್ರೊಪ್ರೈಟರ್ ಲಿಜಿ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆಯ ವಿವಿಧ ಸೇವೆಗಳು ಹಾಗೂ ಭವಿಷ್ಯದ ವಿಸ್ತರಣೆ ಯೋಜನೆಗಳ ಕುರಿತು ವಿವರಿಸಿದರು. ಅವರು ಸಂಸ್ಥೆಯ ಗುಣಮಟ್ಟದ ಸೇವೆ ಮತ್ತು ಗ್ರಾಹಕ ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಗೆ ಆಧಾರ ಎಂದು ತಿಳಿಸಿದರು.
ವಿಶೇಷ ಶುಭಾಶಯ
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹಾಜರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ ಸಂಸ್ಥೆಯ ಸೇವಾ ನಿಷ್ಠೆ, ಉದ್ಯೋಗಾವಕಾಶ ಸೃಷ್ಟಿ ಹಾಗೂ ಸಮಾಜಮುಖಿ ಬದ್ಧತೆಯನ್ನು ಪ್ರಶಂಸಿಸಿ ಸಂಸ್ಥೆಗೆ ಶುಭ ಹಾರೈಸಿದರು.



ಸಂಸ್ಥೆಯ ತಂಡದ ಕೊಡುಗೆ
ಹರ್ಷಿತ್ , ಸಲೀನ, ಬಿನ್ಸನ್ ಆರ್.ಕೆ, ಜಾಯ್ಲಿನ್ ಥೋಮಸ್, ರೆಣುಕಾ ಬಿ ಸೇರಿದಂತೆ ಸಂಸ್ಥೆಯ ತಂಡದ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಪ್ರಮುಖವಾಗಿ ಸಹಕರಿಸಿದರು.
ನಿರೂಪಣೆ ದೈಜಿ ಡಿಸೋಜಾ ಅವರು ಸುಂದರವಾಗಿ ನಿರ್ವಹಿಸಿದ್ದು,

ಡಿ.ಕೆ. ಗ್ರೂಪ್ನ ಆಡಳಿತ ನಿರ್ದೇಶಕ ಅಲ್ವಿನ್ ಜೊಯಲ್ ನೊರೋನ್ಹಾ ಧನ್ಯವಾದ ಸಮರ್ಪಣೆ ಮಾಡುವ ಮೂಲಕ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ಸಂಪನ್ನವಾಯಿತು.




