ದಿನಾಂಕ 21-05-2025 ಬುಧವಾರ ಬೆಳಗ್ಗೆ 10.30 ಕುಕ್ಕೆ ಮ್ಯಾಕ್ ಮಾರ್ಕ್ ಇನ್ಪ್ರಾ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ಪಂಪು ವೆಲ್ ಮಂಗಳೂರು ಎಂಬಲ್ಲಿ ಡಿ.ಕೆ. ಗ್ರೂಪ್ ಆಫ್ ಕಂಪನೀಸ್ ಇದರ 13 ನೇ ಶಾಖೆ ಯು ಉದ್ಘಾಟನಾ ಸಮಾರಂಭ ನಡೆಯಿತು.

ಡಿ.ಕೆ. ಗ್ರೂಪ್ ಆಫ್ ಕಂಪನೀಸ್ ನ ಸ್ಥಾಪಕ ಸದಸ್ಯರು ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀ ಆಲ್ವಿನ್ ಜೋಯಲ್ ನೋರೋನ್ಹ. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಸೇವೆ ನೀಡುವ ಮೂಲಕ ಇಂದು 12 ಹೆಚ್ಚು ಶಾಖೆಗಳನ್ನು ಹೊಂದಿದ್ದು ಒಂದೇ ಸೂರಿನಲ್ಲಿ ವಿವಿಧ ಉತ್ತಮ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಜನರನ್ನ ಆಕರ್ಷಿಸುತ್ತಿವೆ ಎಂದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮ.ನ.ಪ ಸದಸ್ಯರುಗಳಾದ ಶೋಭಾ ಪೂಜಾರಿ, ಸಂದೀಪ್ ಗರೋಡಿ, ಡಿ.ಕೆ.ಗ್ರೂಪ್ ಆಫ್ ಕಂಪನೀಸ್ ನ ವಿವಿಧ ಶಾಖೆಗಳ ಪ್ರಮುಖರಾದ ಕಿರಣ್, ನೆಲ್ಸನ್ , ಪ್ರತಿಭಾ ಮತ್ತಿತರರ ಡಿ.ಕೆ. ಗ್ರೂಪ್ ಆಫ್ ಕಂಪನೀಸ್ ನ ಪ್ರಮುಖರು ಉಪಸ್ಥಿತರಿದ್ದರು. ಡಿ. ಕೆ. ಗ್ರೂಪ್ ಆಫ್ ಕಂಪನೀಸ್ ನ ಪಂಪ್ ವೆಲ್ ಶಾಖೆ ಯು ಮ್ಯಾನೇಜಿಂಗ್ ಪಾಲುದಾರ ಸುಶಾನ್ ಸುವರ್ಣ, ಪಾಲುದಾರ ವಿನಿತ್ ಎ.ಕೆ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


