ಇಂದು ಮುಂಜಾನೆ 27-03-2026 ಮುಂಜಾನೆ 3:30ರ ಸುಮಾರಿಗೆ ಫ್ಲೈಓವರ್ ಮೇಲೆಯೇ ಕ್ರೂರ ಹತ್ಯೆ ನಡೆದು ನಗರ ಬೆಚ್ಚಿಬಿದ್ದಿದೆ. ಕುಖ್ಯಾತ ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಮೇಲೆ ಹಂತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಜೀವ ಕಸಿದುಕೊಂಡಿದ್ದಾರೆ.
💥 ಸಿನಿಮಾ ಸ್ಟೈಲ್ ಎಸ್ಕೇಪ್!
ಕೊಲೆ ಬಳಿಕ ಆರೋಪಿಗಳು ಪಂಪ್ ವೆಲ್ ಮೂಲಕ ಹೈವೇಗೆ ಪ್ರವೇಶಿಸಿ, ಬಿಸಿ ರೋಡ್ ಮಾರ್ಗವಾಗಿ ಮಾಣಿ ಕಡೆಗೆ ಚಲಿಸಿದ್ದಾರೆ ಎನ್ನಲಾಗಿದೆ.
ಮಾಣಿ ಹೈವೇ ಬದಿಯಲ್ಲಿ ಹಂತಕರು ಬಳಸಿದ ಕಾರು ಪತ್ತೆಯಾಗಿದ್ದು, ಬಳಿಕ ಮತ್ತೊಂದು ವಾಹನದಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
🚗 ಕಾರು ಪತ್ತೆ — ಸುಳಿವುಗಳ ಬೆನ್ನುಹತ್ತಿದ ಪೊಲೀಸರು
ಘಟನಾ ಸ್ಥಳದಿಂದ ಮಾಣಿವರೆಗಿನ ಮಾರ್ಗದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಗೂಢಚರ್ಯೆ ತೀವ್ರಗೊಂಡಿದೆ.
⚔️ ಹಳೆಯ ವೈಷಮ್ಯದ ರಕ್ತಪಾತ ಅಂತ್ಯ?
2021ರಲ್ಲಿ ಕೆಸಿ ರೋಡ್ ಬಳಿ ಇದೇ ಆರೀಫ್ ಮೇಲೆ ಟೋಪಿ ನೌಫಲ್ ಕೊಲೆ ಯತ್ನ ನಡೆಸಿದ್ದ. ಆಗ ಅದೃಷ್ಟವಶಾತ್ ಪಾರಾಗಿದ್ದ ಆರೀಫ್, ಇಂದು ಹಂತಕರ ಕತ್ತಿಗೆ ಬಲಿಯಾಗಿದ್ದಾನೆ.
ಇತ್ತೀಚೆಗೆ ತಲಪಾಡಿ ರೈಲ್ವೆ ಟ್ರಾಕ್ ಬಳಿ ನೌಫಲ್ ಮೃತಪಟ್ಟಿದ್ದ ಘಟನೆಗೂ ಈ ಕೊಲೆಗೆ ಸಂಬಂಧವಿದೆಯೇ ಎಂಬ ಅನುಮಾನ ಗಾಢವಾಗಿದೆ.
🕵️ ರಿವೆಂಜ್ ಅಥವಾ ರೌಡಿ ಗ್ಯಾಂಗ್ ಮಾಸ್ಟರ್ ಪ್ಲಾನ್?
ಮೇಲ್ನೋಟಕ್ಕೆ ಇದು ಪ್ರತೀಕಾರದ ಕೊಲೆ ಎಂದು ತೋರುತ್ತಿದ್ದರೂ, ಇದರ ಹಿಂದೆ ದೊಡ್ಡ ಮಟ್ಟದ ಸಂಚು ಮತ್ತು ಗ್ಯಾಂಗ್ಗಳ ಪಕ್ಕಾ ಪ್ಲಾನಿಂಗ್ ಇದ್ದಂತೆ ಕಾಣುತ್ತಿದೆ.
🚨 ನಗರದಲ್ಲಿ ಆತಂಕ — ಪೊಲೀಸ್ ತನಿಖೆ ಚುರುಕು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
👉 ಫ್ಲೈಓವರ್ ಮೇಲೆ ನಡೆದ ಈ ದಾಳಿಯು ಮತ್ತೊಮ್ಮೆ ನಗರದಲ್ಲಿ ಅಂಡರ್ವಲ್ಡ್ ಚಟುವಟಿಕೆಗಳ ಭೀತಿಯನ್ನು ಎಬ್ಬಿಸಿದೆ…!




