ಮಂಗಳೂರು ನಗರದ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಏಪ್ರಿಲ್ 12ರಂದು ಬಹಿರಂಗ ಅಧಿವೇಶನ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ವೈಭವದಿಂದ ಆಯೋಜಿಸಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಪುರಭವನ (ಟೌನ್ ಹಾಲ್) ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಕುರಿತು ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಮಾಲಾಡಿ ಅವರು ಮಾಹಿತಿ ನೀಡಿದ್ದಾರೆ.
ಈ ಅಧಿವೇಶನದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ, ಶ್ರೀ ಕೊಡಾನ್ ಮೋಹನದೇವ್ ಆತ್ಮ ಹಾಗೂ ಡಾ. ಎಂ.ಕೆ. ಶೈಲಜಾ ಆಳ್ವ ಅವರು ಗೌರವ ಉಪಸ್ಥಿತರಾಗಲಿದ್ದು, ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಡಾ. ಕೊಡ್ಯಾನ್ ನಾಗಪ್ಪ ಆಳ್ವ ಹಾಗೂ ಶ್ರೀಮತಿ ಕಲ್ಯಾಣಿ ಆಳ್ವ ಅವರ ಸ್ಮರಣಾರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತರು: ಸಂಗೀತ : ಗುರುಕಿರಣ್, ಸಹಕಾರಿ ಕ್ಷೇತ್ರ : ಡಾ. ದೇವಿಪ್ರಸಾದ್ ಶೆಟ್ಟಿ ,ದಾರ್ಮಿಕ ಕ್ಷೇತ್ರ ಕೆ ಕೆ ಶೆಟ್ಟಿ ,ವೈದ್ಯಕೀಯ ಕ್ಷೇತ್ರ: ಡಾ. ಸತೀಶ್ ಭಂಡಾರಿ ,ದೈವಾರಾಧನೆ: ಡಾ. ಅಶೋಕ್ ಆಳ್ವ ,ಸಮಾಜ ಸೇವೆ: ಕೆಂಚನೂರು ಸೋಮಶೇಖರ ಶೆಟ್ಟಿ ,ಶಿಕ್ಷಣ ಕ್ಷೇತ್ರ: ದಿನೇಶ್ ಆಳ್ವ ,ಕೃಷಿ ಕ್ಷೇತ್ರ: ಸದಾಶಿವ ಶೆಟ್ಟಿ ,ಕೃಷಿ ಅಭಿವೃದ್ಧಿ: ಡಾ. ಸರಿತಾ ಹೆಗ್ಡೆ , ಉತ್ಪಾದನಾ ಕ್ಷೇತ್ರ: ರವೀಂದ್ರನಾಥ ಮಾರ್ಲ ಸೇರಿದಂತೆ ಹಲವಾರು ಗಣ್ಯರಿಗೆ ಪ್ರಶಸ್ತಿ ಪುರಸ್ಕರಗಳು ಇವೆ
ವಿಶೇಷ ಸನ್ಮಾನ:
ಕೊಡಿಯಾಲ್ಗುತ್ತು ಭಾಸ್ಕರ ರೈ ಅವರ ಸ್ಮರಣಾರ್ಥವಾಗಿ, ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಯಕ್ಷಗಾನ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ ಅವರಿಗೆ ವಿಶೇಷ ಸನ್ಮಾನ ನೀಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಬಂಟ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.






