ಬೆಳ್ತಂಗಡಿ : ಅಡಿಕೆ ವ್ಯಾಪಾರದ ಅಂಗಡಿಗೆ ಸ್ಕೂಟರಿನಲ್ಲಿ ಬಂದ ಅಪರಿಚಿತರು ಕ್ಯಾಶ್ ಡ್ರಾವರಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಘಟನೆ ಮಡಂತ್ಯಾರು ಗ್ರಾಮದ ನಾವುಂಡ ಎಂಬಲ್ಲಿ ನಡೆದಿದೆ. ಮಾಲಾಡಿ ಗ್ರಾಮದ ಟಿ. ಪುಷ್ಪರಾಜ ಹೆಗ್ಡೆ ಎಂಬವರ ದೂರಿನಂತೆ, ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯಲ್ಲಿ ಅಡಕೆ ವ್ಯಾಪಾರ ಅಂಗಡಿಯನ್ನು ನಡೆಸುತ್ತಿದ್ದು ಜ.1 ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬವರಲ್ಲಿ ಕ್ಯಾಷ್ ಡ್ರಾವರ್ ನ ಕೀ ಯನ್ನು ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿರುತ್ತಾರೆ. ಮಧ್ಯಾಹ್ನ ಸಮಯ ಅಂಗಡಿಯಲ್ಲಿದ್ದ ಇಸ್ಮಾಯಿಲ್ ಕರೆ ಮಾಡಿ,ಇಬ್ಬರು ಅಪರಿಚಿತರು ಸ್ಕೂಟರಿನಲ್ಲಿ ಅಂಗಡಿಗೆ ಬಂದಿದ್ದುತನ್ನ ಗಮನ ಬೇರೆಡೆಗೆ ಸೆಳೆದು ಕ್ಯಾಷ್ ಡ್ರಾಯರ್ ನಲ್ಲಿದ್ದ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಮಾಲೀಕರು ಅಂಗಡಿಗೆ ಬಂದು ಕ್ಯಾಶ್ ಡ್ರಾವರ್ ನ್ನು ಪರಿಶೀಲಿಸಿದಾಗ ಡ್ರಾವರ್ ನಲ್ಲಿದ್ದ ಒಟ್ಟು 2,31,000 ರೂ.ಹಣ ಕಳವಾಗಿರುವುದು ಕಂಡುಬಂದಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 01/2024 ಕಲಂ: 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
©2021 Tulunada Surya | Developed by CuriousLabs