ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಅಂದರ್ ಬಾಹರ್ ಸ್ಥಳ ದಲ್ಲಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.






ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲಿಸ್ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಓಝೋನ್ ಲಾಡ್ಜನ 2 ನೇ ಮಹಡಿಯ ರೂಮ್ ಒಂದರಲ್ಲಿನ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟದ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ಧಾಳಿ ನಡೆಸಿ 1)ಗೋಪಾಲ ನಾಯ್ಕ, ಕುಳ್ಳಂಜೆ ಗ್ರಾಮ, ಕುಂದಾಪುರ, 2) ರಮೇಶ್, ಕಾವೂರು ಗ್ರಾಮ, ಮಂಗಳೂರು, 3) ಅಭಿಲಾಷ, ಕಾವೂರು ಗ್ರಾಮ, ಮಂಗಳೂರು 4) ವಿಕ್ರಮ್, ಕಾವೂರು ಗ್ರಾಮ, ಮಂಗಳೂರು, 5) ರತ್ನಾಕರ ಶೆಟ್ಟಿ, ಕೊರ್ಗಿ ಗ್ರಾಮ, ಕುಂದಾಪುರ, 6) ಮೊಹಮ್ಮದ್ ಹುಸೇನ್, ಮಣಿಪಾಲ, ಉಡುಪಿ ಎಂಬುವವರನ್ನು ವಶಕ್ಕೆ ಪಡೆದಿದ್ದು, ಆಟಕ್ಕೆ ಬಳಸಿದ ನಗದು ರೂ. 2,38,000/-, ಆರೋಪಿತರ ಮೊಬೈಲ್ ಫೋನ್-5, ಇಸ್ಪೀಟು ಎಲೆಗಳು-52, ಫೈಬರ್ ಟೇಬಲ್ಗಳು-2, ಪ್ಲಾಸ್ಟಿಕ್ ಕುರ್ಚಿಗಳು-9 ಇವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ
ಆರೋಪಿತರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 163/2025 ಕಲಂ: 79, 80 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
