ಬಿಲ್ಲವ ಸಂಘ (ರಿ ) ಉರ್ವ – ಅಶೋಕನಗರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 171 ನೇ ಜನ್ಮದಿನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ದಾಮೋದರ ದಂಡಕೇರಿ, ಮಾಲಕರು ಯಾಮಿನಿ ಬಿಲ್ಡರ್ಸ್ & ಡೆವಲಪರ್ಸ್, ಮಂಗಳೂರು, ಮಾತನಾಡುತ್ತ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಹೇಳಿದ ನಾರಾಯಣ ಗುರುಗಳ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸ ಬೇಕೆಂದು ಹೇಳಿದರು. ನಾರಾಯಣ ಗುರುಗಳ ಕುರಿತ ಉಪನ್ಯಾಸವನ್ನು ಡಾ, ಮೀನಾಕ್ಷಿ ರಾಮಚಂದ್ರ, ಹಿರಿಯ ಸಾಹಿತಿ ಮಂಗಳೂರು ಮಾತನಾಡುತ್ತ ಕೇರಳದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು ಮಹಾನ್ ಸಂತ, ಕೇರಳದಲ್ಲಿ ಶೂದ್ರ ವರ್ಗ ಮತ್ತು ಕೆಳ ವರ್ಗದವರಿಗೆ ಸ್ವಾಭಿಮಾನ ಮತ್ತು ಧೈರ್ಯ ತುಂಬಿದವರು ನಾರಾಯಣ ಗುರುಗಳು, ವಿದ್ಯೆ ಮತ್ತು ಉದ್ಯೋಗ ಹೆಚ್ಚಿನ ಮಹತ್ವ ನೀಡಿದವರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ ನಾರಾಯಣ ಗುರುಗಳ ಜಯಂತಿಯ ಶುಭಾಶಯ ಕೋರಿದರು.
ಶ್ರೀ ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರು,
ಶ್ರೀ ಆರ್. ಪದ್ಮರಾಜ್ ಮಾತನಾಡುತ್ತ ನಾರಾಯಣ ಗುರುಗಳು ಕೇರಳದಲ್ಲಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿ ಮಾಡಿದರು, ಅವರು ಸಮಾಜದಲ್ಲಿ ಸಂಘರ್ಷ ರಹಿತ ಕ್ರಾಂತಿ ಮಾಡಿದರು ಪ್ರೀತಿ, ವಿಶ್ವಾಸದಿಂದ ಜೀವನ ಮಾಡುವ ದೇವರ ಅನುಗ್ರಹ ಸಿಗುತ್ತದೆ ಎಂದು ಹೇಳಿದರು.
ಡಾ, ಯೇನಪೋಯ ಅಬ್ದುಲ್ಲ ಕುಂಜಿ, ಕುಲಪತಿಗಳು, ಏನೇಪೋಯ ವಿಶ್ವವಿದ್ಯಾಲಯ ಮಂಗಳೂರು
ಶ್ರೀ ಸೂರ್ಯಕಾಂತ್ ಜೆ. ಸುವರ್ಣ, ಅಧ್ಯಕ್ಷರು, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿ.
ಶ್ರೀ ಪ್ರಶಾಂತ್ ಸನಿಲ್, ಆಡಳಿತ ನಿರ್ದೇಶಕರು ನಿಧಿಲ್ಯಾಡ್
ಶ್ರೀ ಕಿರಣ್ ಪೈ, ಮಾಲಕರು ಬಾಬಾ ಸಾಹುಕಾರ್ ಪೈ ಪೆಟ್ರೋಲ್ ಪಂಪ್ ಮಂಗಳೂರು,
ಡಾ, ಬಿ. ಜಿ. ಸುವರ್ಣ, ಗೌರವ ಅಧ್ಯಕ್ಷರು, ಬಿಲ್ಲವ ಸಂಘ (ರಿ ) ಉರ್ವ ಅಶೋಕನಗರ,
ಮುಂತಾದ ಅತಿಥಿಗಳು ಉಪಸ್ಥಿತರಿದ್ದರು. ಡಾ, ಸದಾನಂದ ಪೂಜಾರಿ ಖ್ಯಾತ ಮೂತ್ರ ರೋಗ ತಜ್ಞರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಶ್ರೀ ರಾಜೇಂದ್ರ ಚಿಲಿಂಬಿ, ಟ್ರಸ್ಟಿ ಮಂಜುನಾಥ ದೇವಸ್ಥಾನ ಚಿಲಿಂಬಿ,
ಸದಾನಂದ ಅಮೀನ್ ಕುದ್ರೋಳಿ, ಅಂತರ್ ರಾಷ್ಟ್ರಿಯ ಪವರ್ ಲಿಫ್ಟರ್, ಶ್ರೀ ದಿನಕರ ಡಿ. ಬಂಗೇರ, ಗಣಕ ರೇಖಾ ವಿನ್ಯಾಸಗಾರರು, ಹಾನಾ ಪಬ್ಲಿಷರ್, ಮಂಗಳೂರು
ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು, SSLC ಮತ್ತು PUC ನಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯದರ್ಶಿ ಚೇತನ್ ಕುಮಾರ್ ಸ್ವಾಗತಿಸಿದರು, ನಿತ್ಯಾ ಹರೀಶ್ ಪ್ರಾಸ್ತವನೆಗೈದರು
ಗೋಪಾಲ್ ಕೋಟ್ಯಾನ್ ಮತ್ತು ಶ್ರೀನಿವಾಸ್. ಬಿ
ಕಾರ್ಯಕ್ರಮ ನಿರೂಪಿಸಿದರು, ಜಯರಾಮ ಕಾರಂದೂರು ವಂದಿಸಿದರು.



